ಬೆಂಗಳೂರು:ಕೊರೊನಾ ವೈರಸ್ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಸೂಕ್ತವಾಗಿ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯ ಎಲ್ಲ ಆಸ್ಪತ್ರೆ, ಏರ್ಪೋರ್ಟ್ಗಳಲ್ಲಿ ಕೊರೊನಾ ಪತ್ತೆಗೆ ಲ್ಯಾಬ್ ಸ್ಥಾಪಿಸುವಂತೆ ಸಿದ್ದರಾಮಯ್ಯ ಒತ್ತಾಯ ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಲಿ ಅಥವಾ ವೈದ್ಯಕೀಯ ಶಿಕ್ಷಣ ಸಚಿವರಾಗಲಿ ಕೊರೊನಾ ನಿಯಂತ್ರಣ ಕುರಿತು ಸದನದಲ್ಲಿ ಒಂದು ಹೇಳಿಕೆ ನೀಡಬೇಕು. ಪ್ರತಿ ದಿನವೂ ಈ ಬಗ್ಗೆ ಮಾಹಿತಿ ನೀಡಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಲಬುರಗಿಯಲ್ಲಿ ಕೊರೊನಾದಿಂದ ಸಾವಾಗಿದೆ. ಆದರೆ ಇನ್ನೂ ಅಲ್ಲಿ ಪರೀಕ್ಷಾ ಲ್ಯಾಬ್ ಮಾಡಿಲ್ಲ. ಆದ್ರೆ ಸರ್ಕಾರ ರಾಜ್ಯದ ಎಲ್ಲ ಏರ್ಪೋರ್ಟ್ಗಳು ಮತ್ತು ಆಸ್ಪತ್ರೆಗಳಲ್ಲಿ ಲ್ಯಾಬ್ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಸದನ ಮುಂದೂಡುವ ಕುರಿತು ಸದನ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯಗೆ ಕೊರೊನಾ ಚೆಕ್ ಅಪ್:
ಸಿದ್ದರಾಮಯ್ಯಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ವಿಧಾನಸೌಧದ ದ್ವಾರದಲ್ಲಿ ನಿಯೋಜಿಸಲಾಗಿರುವ ವೈದ್ಯಕೀಯ ಸಿಬ್ಬಂದಿ ಸಿದ್ದರಾಮಯ್ಯ ಅವರಿಗೆ ಥರ್ಮಲ್ ಚೆಕ್ ಅಪ್ ಮಾಡಿಸಿದರು. ಬಳಿಕ ಸ್ಯಾನಿಟೈಸರ್ನ್ನು ಹಾಕಿಸಿಕೊಂಡು ಸಿದ್ದರಾಮಯ್ಯ ಕೈಗಳನ್ನು ಶುಚಿಗೊಳಿಸಿದರು. ಇದೇ ವೇಳೆ ಶಾಸಕರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಕೂಡ ಇದ್ದರು.