ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಟ್ವೀಟಾಸ್ತ್ರ ಬಳಸಿರುವ ಬಿಜೆಪಿ, ಒಡೆದು ಆಳುವ ನೀತಿ ಪ್ರಯೋಗಿಸಿದ್ದಕ್ಕೇ ಅಲ್ಲವೇ ಸಿದ್ದರಾಮಯ್ಯರನ್ನು ರಾಜ್ಯದ ಜನ ಅಧಿಕಾರದಿಂದ ಕೆಳಗಿಳಿಸಿದ್ದು? ಎಂದು ಪ್ರಶ್ನಿಸಿದೆ.
ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ, ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ?. ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೇ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ ಮತ್ತು ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎಂದು ಟೀಕಿಸಿದೆ.