ಬೆಂಗಳೂರು:ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್‌ಗೆ ಬೆಳಗ್ಗೆ 11-30 ಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಸುಮಾರು ಮೂರು ಗಂಟೆಗಳ ಕಾಲ ಶಾಸಕರ ಜೊತೆ ಮಾತುಕತೆ ನಡೆಸಿ ಅಲ್ಲಿಂದ ಹೊರನಡೆದಿದ್ದಾರೆ.
ನಾಳೆ ಬೆಳಗ್ಗೆ ತಾಜ್ ವಿವಾಂತದಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದರಿಂದ ಎಲ್ಲಾ ಶಾಸಕರು ಬಂದಾಗ ಚರ್ಚೆ ಮಾಡೋಣ ಎಂದು ಸಿದ್ದು ತಿಳಿಸಿದ್ದಾರೆ. ಅಲ್ಲದೆ, ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲೇ ಭೇಟಿ ಮಾಡಿ ಅಧಿವೇಶನದ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.