ಕರ್ನಾಟಕ

karnataka

ETV Bharat / state

'ದೇವೇಗೌಡರ ಮೊಮ್ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಸಿದ್ದ್ರಾಮಣ್ಣಗೆ ಇದೆ’ - news kannada

ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ ಬಣ್ಣಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ

By

Published : Apr 2, 2019, 6:19 PM IST

ಬೆಂಗಳೂರು:ಜೆಡಿಎಸ್​ ವರಿಷ್ಠ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್​ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ, ನಮ್ಮ ಟಗರು ಸಿದ್ದ್ರಾಮಣ್ಣನವರ ಮೇಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಯ ಆಯ್ಕೆಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ‌ ಮೈತ್ರಿ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಾಗಿದ್ದು ಪರಿಣಾಮ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಇದೊಂದು ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಮೊಯ್ಲಿ ನೇತೃತ್ವದ‌ಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಮುನೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಗರು ಸಿದ್ದ್ರಾಮಣ್ಣ ಎಂದು ಕರೆಯುವ ಮೂಲಕ ಜೆಡಿಎಸ್​ ಅಭ್ಯರ್ಥಿಗಳ ಗೆಲುವಿನ ಸಾರಥಿ ಎಂದು ಬಣ್ಣಿಸಿದರು. ಅಲ್ಲದೆ ಕಾರ್ಯಕರ್ತರಲ್ಲಿದ್ದ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ


ದೇವೇಗೌಡರು, ಪ್ರಜ್ವಲ್, ನಿಖಿಲ್ ಜೆಡಿಎಸ್​​ ಪಕ್ಷದ ಮೂರು ಕಣ್ಣು:

ಈಶ್ವರನಿಗೆ ಮೂರು ಕಣ್ಣುಗಳಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾಸ್ವಾಮಿ ಜೆಡಿಎಸ್​​ ಪಕ್ಷದ ಮೂರು ಕಣ್ಣು‌ಗಳು. ಕರ್ನಾಟಕ‌ದಲ್ಲಿ ಟಗರು ಅಂತಾನೇ ಪ್ರಸಿದ್ಧಿ ಪಡೆದಿರುವ ನಮ್ಮ ಸಿದ್ದ್ರಾಮಣ್ಣನವರು ಈ ಮೂವರನ್ನು ಗೆಲ್ಲಿಸಿಕೊಂಡು ಬರಲು ಸಾರಥಿ‌ಯಂತೆ ನಿಂತಿದ್ದಾರೆ ಎಂದು ಮುನೇಗೌಡ ಹೇಳಿದರು.

ABOUT THE AUTHOR

...view details