ಕರ್ನಾಟಕ

karnataka

ETV Bharat / state

ಪುಕ್ಕಲು ಅಂದ್ರೆ ಅವರು ತಿಕ್ಕಲು :ಸಿದ್ದರಾಮಯ್ಯ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ - ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಕ್ಕಲು ನಾಯಕರು ಎಂದಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ನಾವು ತಿಕ್ಕಲು ನಾಯಕರು ಎನ್ನುತ್ತೇವೆ. ತಿಕ್ಕಲು ಅಂದರೆ ಹುಚ್ಚು ಎಂದು ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

MLC Chalawadi Narayanaswamy
ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ

By

Published : Oct 13, 2022, 5:11 PM IST

Updated : Oct 13, 2022, 6:13 PM IST

ಬೆಂಗಳೂರು:ನಮ್ಮ ನಾಯಕರ ವಿರುದ್ಧ ಮಾತನಾಡಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಿಕ್ಕಲು ನಾಯಕ ಅನ್ನಬಹುದಲ್ಲವೇ? ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ತಿಕ್ಕಲು ನಾಯಕ:ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಜಕೀಯ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪುಕ್ಕಲು ನಾಯಕರು ಎಂದಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ನಾವು ತಿಕ್ಕಲು ನಾಯಕರು ಎನ್ನುತ್ತೇವೆ. ತಿಕ್ಕಲು ಅಂದರೆ ಹುಚ್ಚು ಅಂತ. ಅವರು ಕೀಳು ಅಭಿರುಚಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ದಿವಾಳಿತನ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ:ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಜೋಕರ್ ಎಂದಿದ್ದಾರೆ. ಕಟೀಲ್ ಅವರಿಗೆ ಜೋಕರ್ ಅಂದರೆ ಏನು ಅಂತ ಗೊತ್ತಿಲ್ಲ. ಯಾಕೆಂದರೆ ಸಿದ್ದರಾಮಯ್ಯ ತರಹ ಅವರಿಗೆ ಇಸ್ಪೀಟ್ ಬರಲ್ಲ. ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ. ಅವರು ರಾತ್ರಿಯಲ್ಲಾ ಇಸ್ಪೀಟ್ ಆಡೋದು ಬೆಳಗ್ಗೆ ಎಲ್ಲಿ ಕೂರುತ್ತಾರೋ ಅಲ್ಲಿ ನಿದ್ದೆ ಮಾಡ್ತಾರೆ ಎಂದು ಟೀಕಿಸಿದರು.

ಒಬ್ಬ ವ್ಯಕ್ತಿಯ ಆರೋಗ್ಯದ ಬಗ್ಗೆ ಮಾತನಾಡಬಾರದು. ಬಸವರಾಜ ಬೊಮ್ಮಾಯಿ ಅವರಿಗೆ ಕಾಲು ನೋವು ಇದೆ. ಒಂದು‌ ಕಿಲೋ ಮೀಟರ್ ನಡೆಯಿರಿ ನೋಡೋಣ ಅಂತ ಚಾಲೆಂಜ್ ಹಾಕ್ತೀರಲಾ?. ರಾಜ್ಯದಲ್ಲಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ‌. ನಿಮ್ಮ ಪಕ್ಷದ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಏನಾಗಿದೆ ಗೊತ್ತಿದೆ‌. ನಿಮ್ಮ ಬಾಯಿ ಚಪಲ ಸರಿಯಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಧೈರ್ಯವಿಲ್ಲದ ಪುಕ್ಕಲು ಸರ್ಕಾರವಿದೆ... ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿ

ದೇವೇಗೌಡರ ಕಾಲು ಹಿಡಿದು ಡಿಸಿಎಂ ಆದರು. ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು. ದಲಿತರ ತಲೆ, ಕುತ್ತಿಗೆ ಹಿಚುಕಿ, ಪರಮೇಶ್ವರ ಅವರನ್ನು ಸೈಡ್ ಮಾಡಿ ಸಿಎಂ ಆದಿರಿ. ನಿಮ್ಮ ಹಾಗೆ ಬಿಟ್ಟಿ ಭಾಗ್ಯಗಳ ಬಗ್ಗೆ ಮಾತನಾಡಲ್ಲ ಎಂದು ತಿರುಗೇಟು ನೀಡಿದರು. ನಾವು ಮೀಸಲಾತಿ ಕೊಟ್ಟಿದ್ದೇವೆ. ಅದಕ್ಕೆ ಹೇಳಿಕೊಳ್ಳುತ್ತಿದ್ದೇವೆ. ಸದಾಶಿವ ಆಯೋಗ ಜಾರಿ ಮಾಡ್ತೇವೆ ಎಂದು ಹೇಳಿದ್ದಾರೆ.

Last Updated : Oct 13, 2022, 6:13 PM IST

ABOUT THE AUTHOR

...view details