ಕರ್ನಾಟಕ

karnataka

ETV Bharat / state

ಇದು ಬಂಡ ಸರ್ಕಾರ, ನಾವು ಸುಮ್ಮನಿರಬೇಕಾ?.. ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದ ಸಿದ್ದರಾಮಯ್ಯ

ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಸುಮ್ಮನೆ ಇದ್ದರೆ ಜನ ಏನಂತಾರೆ?, ಸುಮ್ಮನೆ ಇರಬೇಕಾ?,ನಾವಂತೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದ ಅವರು, ಇದು ಬಂಡ ಸರ್ಕಾರ ಏನೂ ಮಾಡುವುದಕ್ಕೆ ಆಗಲ್ಲ‌..

siddaramaiah-insists-in-assembly-at-bengalore
ಸಿದ್ದರಾಮಯ್ಯ

By

Published : Sep 25, 2020, 6:44 PM IST

ಬೆಂಗಳೂರು :ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ಎದ್ದು ನಿಂತ ಸಿದ್ದರಾಮಯ್ಯ, ಅವಿಶ್ವಾಸ ನಿರ್ಣಯ ನಿನ್ನೆಯೇ ಮಂಡಿಸಿದ್ದೇನೆ. ಚರ್ಚೆಗೆ ಅವಕಾಶ ಕೇಳಿದ್ದೇವೆ. ಆದರೆ, ಇಂದಿನ ಕಲಾಪ ಕಾರ್ಯಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ ಇಲ್ಲ. ಚರ್ಚೆ ನಾಳೆ ಬರಬಹುದು ಅಥವಾ ಇವತ್ತೇ ತೆಗೆದುಕೊಳ್ಳಬಹುದು. ನಾವಂತೂ ಚರ್ಚೆ ಮಾಡುವುದಕ್ಕೆ ಸದಾ ಸಿದ್ದರಿದ್ದೇವೆ ಎಂದರು.

ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಸುಮ್ಮನೆ ಇದ್ದರೆ ಜನ ಏನಂತಾರೆ?, ಸುಮ್ಮನೆ ಇರಬೇಕಾ?,ನಾವಂತೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದ ಅವರು, ಇದು ಬಂಡ ಸರ್ಕಾರ ಏನೂ ಮಾಡುವುದಕ್ಕೆ ಆಗಲ್ಲ‌ ಎಂದರು.

ನಿಲುವಳಿ ಸೂಚನೆ :ಇದೇ ಸಂದರ್ಭದಲ್ಲಿ ಡಿಜೆಹಳ್ಳಿ ಹಾಗೂ ಕೆಜೆಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ನೀಡಿದರು. ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ABOUT THE AUTHOR

...view details