ಕರ್ನಾಟಕ

karnataka

ETV Bharat / state

ಸಿಎಂ ಯಡಿಯೂರಪ್ಪ- ವಿಪಕ್ಷ ನಾಯಕ ಸಿದ್ದರಾಮಯ್ಯ.. ಕಾವೇರಿ ಯಾರಿಗೆಂಬ ಕುತೂಹಲ..

ಅ.18 ರಂದು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದ ಕಾವೇರಿ ನಿವಾಸದಲ್ಲಿನ ಸಿದ್ದರಾಮಯ್ಯ ಹೆಸರಿನ ಫಲಕ ಮರಳಿದ್ದು, ಫಲಕದಲ್ಲಿ ಸಿದ್ದರಾಮಯ್ಯ ಹೆಸರಿನ ಕೆಳಭಾಗ ಪ್ರತಿಪಕ್ಷದ ನಾಯಕರು ಎಂಬ ಅಕ್ಷರ ಮೂಡಿದೆ.

ಸಿದ್ದರಾಮಯ್ಯ ಮನೆಯ ನಾಮಫಲಕ ವಾಪಸ್

By

Published : Oct 20, 2019, 10:48 PM IST

ಬೆಂಗಳೂರು :ಅಗಸ್ಟ್​​ 18 ರಂದು ನಾಪತ್ತೆಯಾಗಿದ್ದ ಕಾವೇರಿ ನಿವಾಸದ ಸಿದ್ದರಾಮಯ್ಯರ ನಾಮಫಲಕ ಮತ್ತೆ ಮರಳಿದೆ. ಈ ಫಲಕದಲ್ಲಿ ಸಿದ್ದರಾಮಯ್ಯ ಎಂಬ ಹೆಸರಿನ ಕೆಳಭಾಗ ಪ್ರತಿಪಕ್ಷದ ನಾಯಕರು ಎಂಬ ಅಕ್ಷರ ಮೂಡಿವೆ.

ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಫಲಕ ಮರಳಿದೆ. ಫಲಕದಲ್ಲಿ ಸಿದ್ದರಾಮಯ್ಯ ಹೆಸರಿನ ಕೆಳಭಾಗ ಪ್ರತಿಪಕ್ಷದ ನಾಯಕರು ಎಂಬ ಅಕ್ಷರ ಮೂಡಿದೆ. ಅ.18 ರಂದು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಫಲಕವನ್ನು ತೆಗೆದುಕೊಂಡು ಹೋಗಿದ್ದರು. ಇಂದು ಕಾವೇರಿ ಮುಂಭಾಗ ಹೊಸದಾಗಿ ನಾಮಫಲಕ ಅಳವಡಿಸಿದ್ದಾರೆ.

ಕಾವೇರಿ ಸಿದ್ದರಾಮಯ್ಯ ನಿವಾಸ ಮುಂಭಾಗ ನಾಮಫಲಕ ತೆರವು ಹಲವು ಚರ್ಚೆಗೆ ಗ್ರಾಸವಾಗಿತ್ತು. ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕಾವೇರಿ ನಿವಾಸವನ್ನು ಸರ್ಕಾರ ಹಂಚಿಕೆ ಮಾಡಿದ್ದು ಅದಕ್ಕೆ ಫಲಕ ತೆಗೆಯಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಕೈ ನಾಯಕರು ಇದನ್ನು ಅಲ್ಲಗಳೆದು, ಹೆಸರಿನ ಕೆಳಭಾಗ ಪ್ರತಿಪಕ್ಷದ ನಾಯಕ ಎಂದು ಬರೆಯಲು ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದರು. ಅದೇ ರೀತಿ ಸಿದ್ದರಾಮಯ್ಯ ಹೆಸರಿನ ಕೆಳಗೆ ಪ್ರತಿಪಕ್ಷದ ನಾಯಕರು ಎಂಬ ಅಕ್ಷರದೊಂದಿಗೆ ನಾಮಫಲಕ ವಾಪಸಾಗಿದೆ.

ಸದ್ಯ ಈ ನಿವಾಸ ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕೆ ಜೆ ಜಾರ್ಜ್ ಅವರಿಗೆ ನೀಡಲಾಗಿತ್ತು. ಅವರು ನಿವಾಸವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಇದೀಗ ಸರ್ಕಾರ ಕಾವೇರಿ ನಿವಾಸವನ್ನು ಸಿಎಂ ಅವರಿಗೆ ನೀಡಿದ್ದು, ಬಿಎಸ್​ವೈ ಆಗಮನದ ನಿರೀಕ್ಷೆಯಲ್ಲಿ ಪೊಲೀಸರು ವಿಶೇಷ ಬ್ಯಾರಿಕೇಡ್‌ ಹಾಗೂ ಇತರೆ ಸುರಕ್ಷತಾ ಸಾಧನಗಳನ್ನು ಇಲ್ಲಿಗೆ ತಂದು ಇರಿಸಿದ್ದಾರೆ.

ಅಲ್ಲದೆ ಮಾಜಿ ಸಚಿವ ಕೆ ಜೆ ಜಾರ್ಜ್ ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದು, ಮನೆ ತೆರವು ಮಾಡಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಒಂದೆಡೆ ಹೊಸ ಬ್ಯಾರಿಕೇಡ್‌ಗಳ ಆಗಮನ ಹಾಗೂ ಹೊಸ ಫಲಕದ ಆಗಮನ ಸಾಕಷ್ಟು ಗೊಂದಲ ಮೂಡಿಸುತ್ತಿದ್ದು, ಯಾರಿಗೆ ಸೇರುತ್ತೆ ಕಾವೇರಿ ನಿವಾಸ ಎಂಬ ಕುತೂಹಲ ಕೆರಳಿಸಿದೆ.

ABOUT THE AUTHOR

...view details