ಕರ್ನಾಟಕ

karnataka

ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ

By

Published : Jul 21, 2019, 7:49 PM IST

ಮೈತ್ರಿ ಸರ್ಕಾರದ ನಾಯಕರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ನಾಳೆ ಕೊನೆ ಪ್ರಯತ್ನ ನಡೆಸಲಿದ್ದು, ನಾಳೆ ನಡೆಯುವ ವಿಧಾನಸಭೆಯಲ್ಲಿ ಏನೆಲ್ಲಾ ತಂತ್ರಗಳನ್ನು ಮಾಡಬಹುದು, ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಚರ್ಚೆ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

Siddaramaiah

ಬೆಂಗಳೂರು:ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್​ಪಿ ಸಭೆ ಆರಂಭವಾಗಿದ್ದು, ಬಹುತೇಕ ಕೈಪಕ್ಷದ ನಾಯಕರು ಸಭೆಗೆ ಆಗಮಿಸುತ್ತಿದ್ದಾರೆ.

ಸಿಎಲ್​ಪಿ ಸಭೆ ಹಿನ್ನೆಲೆಯಲ್ಲಿ ನಗರದ ಗೊರಗುಂಟೆಪಾಳ್ಯ ಸಮೀಪದಲ್ಲಿರುವ ತಾಜ್ ವಿವಾಂತ ಹೋಟೆಲ್​ಗೆ ಪಕ್ಷದಲ್ಲಿರುವ ಬಹುತೇಕ ಎಲ್ಲಾ ಶಾಸಕರು ಆಗಮಿಸಿದ್ದಾರೆ. ನಿನ್ನೆ ತಮ್ಮ ಕ್ಷೇತ್ರಗಳಿಗೆ ತೆರಳಿದ್ದ ಕೆಲ ಶಾಸಕರು ಸಭೆ ಹಿನ್ನೆಲೆಯಲ್ಲಿ ಹೋಟೆಲ್​ಗೆ ಮರಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ .ವೇಣುಗೋಪಾಲ್, ಡಿಸಿಎಂ ಡಾ ಜಿ ಪರಮೇಶ್ವರ್, ಸಚಿವ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರರು ಸಭೆಯಲ್ಲಿದ್ದಾರೆ.

ಏನೇನು ಚರ್ಚೆ:

ಬಹುಮತದ ಬಗ್ಗೆ ಶಾಸಕರ ಜೊತೆ ಮುಖಂಡರ ಚರ್ಚೆ ನಡೆಯಲಿದೆ. ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವ ಅನಿವಾರ್ಯ ಎದುರಾದರೆ ಎಲ್ಲ ಶಾಸಕರು ಪಕ್ಷದ ಪರವಾಗಿ ಮತ ಚಲಾಯಿಸಬೇಕು. ಒಂದೊಮ್ಮೆ ಚಲಾಯಿಸದಿದ್ದರೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೂಡ ವಿವರಿಸುವ ಸಾಧ್ಯತೆ ಇದೆ.

ಮೈತ್ರಿ ಸರ್ಕಾರದಿಂದ ಆಗಿರುವ ಸಮಸ್ಯೆಗಳು ಹಾಗೂ ಇದರಿಂದಲೇ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬ ಕುರಿತು ಶಾಸಕರು ಮಾಹಿತಿ ನೀಡುವ ಸಾಧ್ಯತೆ ಹೆಚ್ಚಿದೆ.
ಇದೀಗ ಹೊಸದಾಗಿ ಕಾಂಗ್ರೆಸ್ ನಾಯಕರಿಗೆ ಸಿಎಂ ಸ್ಥಾನ ನೀಡುವ ಕುರಿತು ಕೂಡ ಮಾತು ನಡೆದಿದ್ದು, ಇದನ್ನೇ ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ಅತೃಪ್ತರು ಯಾರನ್ನು ಸಿಎಂ ಮಾಡಿದರೆ ಅನುಕೂಲ ಎಂದು ಅಭಿಪ್ರಾಯಪಡುವರೋ ಅಂತವರಿಗೆ ಅವಕಾಶ ನೀಡಿ ಅತೃಪ್ತರನ್ನು ಮರಳಿ ಕರೆಸಿಕೊಳ್ಳುವ ಪ್ರಯತ್ನ ನಡೆಸುವ ಕುರಿತು ಕೂಡ ಚರ್ಚೆ ನಡೆಯಲಿದೆ.

ಕೊನೆಯ ಪ್ರಯತ್ನ:

ಪ್ರತಿಪಕ್ಷ ಬಿಜೆಪಿ ವಿಶ್ವಾಸಮತಯಾಚನೆಗೆ ಪಟ್ಟು ಹಿಡಿಯಲಿದ್ದು, ಈ ವೇಳೆ ಸರ್ಕಾರವನ್ನು ಉಳಿಸಿಕೊಳ್ಳಲು ಏನೆಲ್ಲಾ ರಣತಂತ್ರಗಳನ್ನು ಮಾಡಬೇಕು. ನಾಳೆ ಸುಪ್ರೀಂ ಕೋರ್ಟ್​ನಲ್ಲಿ ಕಾಂಗ್ರೆಸ್ ಪಕ್ಷ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿ ಯಾವ ರೀತಿಯಲ್ಲಿ ತೀರ್ಪು ಬರಲಿದೆ ಎಂಬ ಕುರಿತು ಚರ್ಚೆ ನಡೆಯಲಿದೆ.

ನಾಳೆ ಇಲ್ಲಿಂದಲೇ ಪ್ರಯಾಣ:

ನಾಳೆ ಬೆಳಗ್ಗೆ ಹೋಟೆಲ್​ನಿಂದ ನೇರವಾಗಿ ಬಸ್ಸಿನಲ್ಲಿ ತೆರಳಲಿರುವ ಕೈ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದಿನ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ವೇಣುಗೋಪಾಲ, ಸಿದ್ದರಾಮಯ್ಯ, ಪರಮೇಶ್ವರ್ , ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಡಿಕೆಶಿ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ನಾಯಕ್, ಆರ್.ವಿ. ದೇಶಪಾಂಡೆ, ಕೃಷ್ಣಪ್ಪ, ಶಿವಶಂಕರ್ ರೆಡ್ಡಿ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಅಂಜಲಿ ನಿಂಬಾಳ್ಕರ್ ಸೇರಿದಂತೆ ಬಹುತೇಕ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details