ಕರ್ನಾಟಕ

karnataka

ETV Bharat / state

ದಿನದ ಕಲಾಪದ ನಂತರ ಕಾಂಗ್ರೆಸ್​​ ಶಾಸಕರ ಸಭೆ ಕರೆದ ಸಿದ್ದರಾಮಯ್ಯ - kannadanews

ಇಂದಿನ ವಿಧಾನಸಭಾ ಕಲಾಪ ಮುಗಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲ ಶಾಸಕರ ಸಭೆ ಕರೆದಿದ್ದಾರೆ.

ಶಾಸಕರ ಸಭೆ ಕರೆದ ಸಿದ್ದರಾಮಯ್ಯ

By

Published : Jul 12, 2019, 12:57 PM IST

ಬೆಂಗಳೂರು: ಇಂದಿನ ಕಲಾಪ ಮುಗಿದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ.

ವಿಧಾನಮಂಡಲ ಉಭಯ ಸದನಗಳ ಮಳೆಗಾಲದ ಅಧಿವೇಶನ ಇಂದು ಆರಂಭವಾಗಿದ್ದು, ಕೇವಲ ಸಂತಾಪಕ್ಕೆ ಸೀಮಿತವಾಗಲಿದೆ. ಇದರಿಂದ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಲಿದೆ ಎನ್ನಲಾಗ್ತಿದೆ. ಹೀಗಾಗಿ ಸದನದ ನಂತರ ಶಾಸಕರ ಸಭೆ ಸೇರಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಇಂದಿನ ಕಲಾಪಕ್ಕೆ ಬರುವ ಎಲ್ಲಾ ಶಾಸಕರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಧಾನಸೌಧದ ಕಚೇರಿಯಲ್ಲಿ ಸಭೆ ನಡೆಯಲಿದೆ. ಇದು ಕೇವಲ ಶಾಸಕರ ಸಭೆಯಾಗಿದ್ದು, ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಅಲ್ಲವೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details