ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿದ್ದರಾಮಯ್ಯ... ಯಾಕೆ ಅದೇ ದಿನ ಈ ಮೀಟಿಂಗೂ ಇದೆ​​! - CLP meeting on september 18

ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್​ ಶಾಸಕಾಂಗ ಸಭೆ ಕರೆದಿದ್ದಾರೆ, ಅದೇ ದಿನ ರಾಜ್ಯ ಸಚಿವ ಸಂಪುಟದ ಸಭೆ ಕೂಡಾ ನಡೆಯಲಿದೆ. ಇನ್ನು ಸಿಎಲ್​ಪಿ ಸಭೆಯಲ್ಲಿ ಸರ್ಕಾರದ ವೈಫಲ್ಯ ಹಾಗೂ ಹಲವು ವಿಚಾರಗಳ ಚರ್ಚೆಯಾಗಲಿದೆ ಎನ್ನಲಾಗಿದೆ.

ಸಿದ್ದರಾಮಯ್ಯ

By

Published : Sep 14, 2019, 2:41 PM IST

ಬೆಂಗಳೂರು: ಸಿಎಲ್​ಪಿ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೆ.18ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ.

ಬರ, ನೆರೆ ವಿಚಾರದಲ್ಲಿ ಸರ್ಕಾರದ ವೈಫಲ್ಯ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ, ಕೈ ಶಾಸಕರ ಕ್ಷೇತ್ರಗಳ ಯೋಜನೆಗೆ ಸರ್ಕಾರದ ತಡೆ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಲಿದೆ.

ಸಿಎಲ್​ಪಿ ಸಭೆಯ ಪತ್ರ

ಸಚಿವ ಸಂಪುಟ ಸಭೆ:
ಇನ್ನು ಅಂದೇ ರಾಜ್ಯ ಸಚಿವ ಸಂಪುಟ ಸಭೆಯೂ ಇದೆ. ಬೆಳಗ್ಗೆ ಕೈ ಸಿಎಲ್​ಪಿ ಸಭೆ, ಸಂಜೆ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯಲಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ

ABOUT THE AUTHOR

...view details