ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಕುಶಲೋಪರಿ ವಿಚಾರಿಸಿದ ಸ್ಪೀಕರ್.. ಇಲಿ ಕಾಟದ ಬಗ್ಗೆ ಸ್ವಾರಸ್ಯಕರ ಮಾತುಕತೆ - ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತುಕತೆ

ವಿಧಾನಸೌಧಸ ಮೊಗಸಾಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಕೆಲಕಾಲ ಸ್ವಾರಸ್ಯಕರ ಮಾತುಕತೆ ನಡೆಯಿತು.

siddaramaiah-and-speaker-kageri-talking-each-other
ಸಿದ್ದರಾಮಯ್ಯ ಕುಶಲೋಪರಿ ವಿಚಾರಿಸಿದ ಸ್ಪೀಕರ್

By

Published : Feb 17, 2022, 8:01 PM IST

ಬೆಂಗಳೂರು:ಸದನದಲ್ಲಿ ಧರಣಿನಿರತ ಕಾಂಗ್ರೆಸ್ ಶಾಸಕರನ್ನು ಮೊಗಸಾಲೆಯಲ್ಲಿ ಭೇಟಿಯಾಗಿ ಸ್ಪೀಕರ್ ಕಾಗೇರಿ ಕುಶಲೋಪರಿ ವಿಚಾರಿಸಿದರು. ಈ ವೇಳೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಮಧ್ಯೆ ಕೆಲ ಸ್ವಾರಸ್ಯಕರ ಮಾತುಕತೆ ನಡೆಯಿತು.

ಏನಾದರೂ ಅಗತ್ಯ ಇದ್ದರೆ ಹೇಳಿ ಎಂದು ಸ್ಪೀಕರ್ ಕಾಗೇರಿ ಸಿದ್ದರಾಮಯ್ಯರ ಬಳಿ ಕೇಳಿಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಕಾಟ ಕೊಟ್ಟಿದ್ದವು ಅಂತಾರೆ.

ಸಿದ್ದರಾಮಯ್ಯ ಕುಶಲೋಪರಿ ವಿಚಾರಿಸಿದ ಸ್ಪೀಕರ್

ಆಗ ಸ್ಪೀಕರ್ ಕಾಗೇರಿ, ಈಗಲೂ ಸಣ್ಣ ಸಣ್ಣ ಇಲಿಗಳಿವೆ ಸಾರ್ ಎಂದು ಪ್ರತಿಕ್ರಿಯಿಸುತ್ತಾರೆ. ಇದೇ ವೇಳೆ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಈಗ ಹೆಗ್ಗಣಗಳಿಲ್ಲ ಸಾರ್, ಸ್ಯಾನಿಟೈಸ್ ಮಾಡಿದ್ದೇವೆ, ಇಲಿಗಳು ಕಡಿಮೆಯಾಗಿವೆ ಎಂದರು.

ಇದನ್ನೂ ಓದಿ:ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ

ಆಗ ಸ್ಪೀಕರ್ ಇವತ್ತೂ ಏನಾದರೂ ಇಲಿಗಳು ಬಂದ್ರೆ ನಾನೇ ಬಿಟ್ಟಿದ್ದು ಅಂತ ಮಾತ್ರ ಹೇಳಬೇಡಿ ಎಂದರು. ಆಗ ಎಲ್ಲರೂ ನಗೆಗಡಲಲ್ಲಿ ತೇಲಿದರು. ಇದಕ್ಕೂ ಮುಂಚೆ ಸ್ಪೀಕರ್ ಕಾಗೇರಿ ಶಾಸಕ ಅಜಯ್ ಸಿಂಗ್ ಒಳ್ಳೆಯ ಸಾಂಗ್ ಹೇಳ್ತಾರೆ ಅಂತಾರೆ, ಅವರಿಂದ ಹಾಡಿಸಿ. ಆಗ ಸಿದ್ದರಾಮಯ್ಯ, ಕಳೆದ ಬಾರಿ ಅಶೋಕ್ ಪಟ್ಟಣ್ ಇದ್ದ. ಆಗ ಅವನು ಒಳ್ಳೆಯ ಜೋಕ್ ಕಟ್ ಮಾಡುತ್ತಿದ್ದ ಎಂದು ಸ್ಮರಿಸಿದರು.

ABOUT THE AUTHOR

...view details