ಕರ್ನಾಟಕ

karnataka

ETV Bharat / state

ನಾಳೆಯಿಂದ ಎಂಟು ದಿನ ಸಿದ್ದರಾಮಯ್ಯ ಉಪ ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ

ಏ.11ರಂದು ಮಸ್ಕಿ ಹಾಗೂ 12ರಂದು ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರವಾಸದ ಬಳಿಕ ಸಿದ್ದರಾಮಯ್ಯ ಬೆಳಗಾವಿಗೂ ತೆರಳಲಿದ್ದಾರೆ. ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ..

ಸಿದ್ದರಾಮಯ್ಯ ಚುನಾವಣಾ ಪ್ರವಾಸ
ಸಿದ್ದರಾಮಯ್ಯ ಚುನಾವಣಾ ಪ್ರವಾಸ

By

Published : Apr 4, 2021, 9:07 PM IST

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆಯಿಂದ ಎಂಟು ದಿನಗಳ ಕಾಲ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ವಿವಿಧೆಡೆ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದಾರೆ. ಏ. 5 ಮತ್ತು 6 ರಂದು ಮಸ್ಕಿ, 7ಮತ್ತು 8ರಂದು ಬಸವ ಕಲ್ಯಾಣ ವಿಧಾನಸಭೆ, 9 ಮತ್ತು 10ರಂದು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಸಿದ್ದರಾಮಯ್ಯ ಪ್ರವಾಸದ ವೇಳಾಪಟ್ಟಿ

ಬಳಿಕ ಏ.11ರಂದು ಮಸ್ಕಿ ಹಾಗೂ 12ರಂದು ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರವಾಸದ ಬಳಿಕ ಸಿದ್ದರಾಮಯ್ಯ ಬೆಳಗಾವಿಗೂ ತೆರಳಲಿದ್ದಾರೆ. ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಈಗಾಗಲೇ ಅವರ ಪರ ಪ್ರಚಾರ ಕೂಡ ಆರಂಭವಾಗಿದೆ.

ಇದನ್ನು ಓದಿ:ವಿಜಯೇಂದ್ರ ದುಡ್ಡು ಹಂಚುವುದರಲ್ಲಿ ಮಾತ್ರ ಚಾಣಕ್ಯ, ಬೇರೆ ಯಾವುದರಲ್ಲೂ ಅಲ್ಲ: ಸಿದ್ದು ಟಾಂಗ್​

ABOUT THE AUTHOR

...view details