ಮಹಾನ್ ನಾಯಕ ಅಂತ ಸುಮ್ಮನೆ ಗುಮ್ಮ ಇದೆ ಎನ್ನಬಾರದು, ಏನೇ ಇದ್ದರೂ ಬಹಿರಂಗಪಡಿಸಲಿ: ಸಿದ್ದರಾಮಯ್ಯ - ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ತಿದ್ದುಪಡಿ ವಿಧೇಯಕ
ಮಹಾನ್ ನಾಯಕ ಯಾರು ಎಂಬುದನ್ನು ರಮೇಶ್ ಜಾರಕಿಹೊಳಿ ಹೇಳಬೇಕು. ನನ್ನ ಜೇಬಿನಲ್ಲಿ ಗುಮ್ಮ ಇದೆ ಅಂತ ಹೇಳಕೂಡದು, ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ
ಬೆಂಗಳೂರು: ಮಹಾನ್ ನಾಯಕ ಇದ್ದಾರೆ ಅನ್ನುವ ಮೂಲಕ ಗುಮ್ಮ ಇದೆ ಗುಮ್ಮ ಎಂದು ಹೇಳಬಾರದು. ಏನೇ ಇದ್ದರೂ ಸತ್ಯ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ರೈತ ನಾಯಕ ಟಿಕಾಯತ್ ಮೇಲೆ ಕೇಸ್ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಅದನ್ನು ಖಂಡಿಸುತ್ತೇವೆ. ಬೆಂಗಳೂರು ಸೀಜ್ ಮಾಡಿ ಅನ್ನುವುದು ಅಪರಾಧವಲ್ಲ. ಹೀಗಾಗಿ ನಾನು ಖಂಡಿಸುತ್ತೇನೆ ಎಂದರು. ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ತಿದ್ದುಪಡಿ ವಿಧೇಯಕ ಸಂಬಂಧ ಪ್ರತಿಕ್ರಿಯಿಸಿ, ಮೊನ್ನೆ ವಿಧಾನಸಭೆಯಲ್ಲಿ ಧರಣಿ ಕೂತಿದ್ದಾಗ ಬಿಲ್ ಪಾಸ್ ಮಾಡಿಕೊಂಡಿದ್ದಾರೆ. ಇದರಿಂದ ನೇರವಾಗಿ ಟೆಂಡರ್ ಮಾಡೋಕೆ ಅವಕಾಶ ಆಗುತ್ತದೆ. ನಾವು ಎಸ್ಸಿ, ಎಸ್ಟಿಗಳಿಗೆ ಐವತ್ತು ಲಕ್ಷದವರೆಗೆ ಟೆಂಡರ್ ಸಿಗುವಂತೆ ಮಾಡಿದ್ದೆವು. ಆದ್ರೆ ಅದನ್ನ ಮುಚ್ಚಿಹಾಕುವುದಕ್ಕೆ ಹೊಸ ಬಿಲ್ ತಂದಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ದಲಿತರಿಗೆ ಇದರಿಂದ ಅನ್ಯಾಯವಾಗುತ್ತದೆ. ನೇರವಾಗಿ ಟೆಂಡರ್ ಕೊಡುವುದರಿಂದ ಭ್ರಷ್ಟಾಚಾರ ಹೆಚ್ಚುತ್ತದೆ. ಈ ಬಿಲ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ರು.