ಕರ್ನಾಟಕ

karnataka

ETV Bharat / state

ಲಾಕ್ ಡೌನ್​ನಿಂದ ಹಳ್ಳಿ ಮನೆ ಸೇರಿದ ಶುಭಾ ಪೂಂಜಾ - Shubha Poonja

ಲಾಕ್​ಡೌನ್​​ನಿಂದಾಗಿ ಕನ್ನಡ ಚಿತ್ರರಂಗ ಸ್ತಬ್ಧವಾಗಿದೆ. ಶೂಟಿಂಗ್​ ಅಂತ ಯಾವಾಗಲೂ ಬ್ಯುಸಿ ಇರುತ್ತಿದ್ದ ಕಲಾವಿದರು ಈಗ ಮನೆಯಲ್ಲೇ ಬಂದಿಯಾಗಿರಬೇಕಾದ ಸ್ಥಿತಿ ಎದುರಾಗಿದೆ. ಕನ್ನಡ ಚಿತ್ರ ರಂಗದ ಜನಪ್ರಿಯ ನಟಿ ಶುಭಾ ಪೂಂಜಾ ಅವರದ್ದೂ ಈಗ ಇದೇ ಪರಿಸ್ಥಿತಿ. ಶುಭಾ ಪೂಂಜಾ ಈಗ ತಮ್ಮ ಹಳ್ಳಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

Shubha Poonja
ಶುಭಪೂಂಜ

By

Published : Apr 11, 2020, 8:42 AM IST

Updated : Apr 11, 2020, 7:26 PM IST

ಬೆಂಗಳೂರು:ಈ ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡ ಚಿತ್ರ ರಂಗದ ಜನಪ್ರಿಯ ನಟಿ ಶುಭಾ ಪೂಂಜಾ ಈಗ ಹಳ್ಳಿ ಮನೆಯಲ್ಲಿ ಅವರ ಸಂಬಂಧಿಗಳ ಜೊತೆ ಬಂಧಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಉಡುಪಿ ಬಳಿಯ ಶಿರ್ವೆಯಲ್ಲಿ ಸುತ್ತಲೂ ಕಾಡಿದ್ದು, ಅದರ ಮಧ್ಯೆ ಒಂದು ಮನೆ. ಆ ಮನೆಯಲ್ಲಿ ಕೋವಿಡ್​-19 ವೈರಸ್​ನಿಂದ ಎಲ್ಲರೂ ಕಂಗಾಲಾಗಿರುವ ಸಮಯದಲ್ಲಿ ಶುಭಾ ಪೂಂಜಾ ಸಹ ಚಿಂತಿತರಾಗಿದ್ದಾರೆ. ಆದರೆ ಅವರ ದಿನ ನಿತ್ಯದ ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆ ಸಹ ಆಗಿದೆ.

ಶುಭಾ ಪೂಂಜಾ ಅವರ ಸೋದರ ಸಂಬಂಧಿಗಳ ಜೊತೆ ದೂರ ಕ್ರಮಿಸಿ ಕಟ್ಟಿಗೆ ಹೊತ್ತು ತರುತ್ತಾರೆ. ಇನ್ನು ಮನೆ ಬಳಕೆಗೆ ದಿವಸಕ್ಕೆ ಹತ್ತಾರು ಬಾರಿ ಕೊಡದಲ್ಲಿ ನೀರು ಸೇದಿ ತರುತ್ತಾರೆ. ಬಾವಿಯಲ್ಲಿ ನೀರು ಸೇದಿದರೆ ಕುಡಿಯಲು ನೀರು, ಅಡುಗೆ ಮಾಡಲು ಮತ್ತು ಸ್ನಾನ ಮಾಡಲು ಸಾಧ್ಯ ಎಂದು ಶುಭಾ ಪೂಂಜಾ ಹೇಳಿಕೊಂಡಿದ್ದಾರೆ.

ಇನ್ನು ತೊಂದರೆ ಅಂದರೆ ಮನೆಯಲ್ಲಿ ವಿದ್ಯುತ್ ಇಲ್ಲದಿರುವುದು. ಅಡುಗೆ ಮಾಡಿಕೊಳ್ಳಲು ಸಾಕಷ್ಟು ಸಾಮಗ್ರಿಗಳನ್ನು ಶುಭಾ ಪೂಂಜಾ ಮೊದಲೇ ತಂದು ಇಟ್ಟುಕೊಂಡಿದ್ದಾರೆ. ಅವರ ಮನೆಯ ಸುತ್ತ ಯಾರಾದರೂ ಹಸಿವಿನಿಂದ ಇದ್ದರೆ ಅವರಿಗೆ ಸಹ ಶುಭಾ ಪೂಂಜಾರ ಮನೆಯಿಂದಲೇ ಆಹಾರ ನೀಡಲಾಗುತ್ತಿದೆ.

ಲಾಕ್ ಡೌನ್ ಅಲ್ಲ ಒಂದು ರೀತಿಯಲ್ಲಿ ಸೀಲ್ ಡೌನ್ ಆಗಿಯೇ ಇದೆ ಜೀವನ ಎನ್ನುತ್ತಾರೆ ಶುಭ ಪೂಂಜಾ. ಸದ್ಯಕ್ಕೆ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಶುಭಾ ಪೂಂಜಾ ಅಭಿನಯದ ನರಗುಂದ ಬಂಡಾಯ ಬಿಡುಗಡೆ ಆದ ದಿವಸ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಮಾರ್ಚ್ 14 ರಿಂದ ಲಾಕ್ ಡೌನ್ ಆಗಿದ್ದು, ಆ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂದರು. ಮತ್ತೊಂದು ಥ್ರಿಲ್ಲರ್ ಕಥಾ ವಸ್ತು ಸಿನಿಮಾ ರೈಮ್ಸ್​​ನಲ್ಲಿ ಶುಭಾ ಪೂಂಜಾ ಅಭಿನಯಿಸಿದ್ದಾರೆ.

Last Updated : Apr 11, 2020, 7:26 PM IST

ABOUT THE AUTHOR

...view details