ಕನ್ನಡ ಕಿರುತೆರೆಯ ಪ್ರಸಿದ್ಧ ನಟಿ, ನಿರ್ಮಾಪಕಿ ಹಾಗೂ ಕನ್ನಡ ಚಿತ್ರ ‘ಪ್ರಿಮಿಯರ್ ಪದ್ಮಿನಿ’ ಯಿಂದ ಸಿನಿಮಾ ಕ್ಷೇತ್ರದಲ್ಲೂ ಜನಪ್ರಿಯತೆ ಪಡೆದುಕೊಂಡ ಶ್ರುತಿ ನಾಯ್ಡು ಈ ಹಿಂದೆ ಸಾವಯವ ಕೃಷಿ ಬಗ್ಗೆ ಆಸಕ್ತಿ ತೋರಿ ‘ಕಿಚನ್ ಗಾರ್ಡನ್ ಸಹ ಪ್ರಾರಂಭಿಸಿದ್ದರು. ಇತ್ತೀಚಿಗೆ ಅವರು ಮೈಸೂರಿನಲ್ಲಿ ‘ಮೈಸೂರು ಮಿರ್ಚಿ’ ಹೋಟೆಲ್ ಉದ್ಯಮ ಸಹ ಶುರು ಮಾಡಿದರು. ಅದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಸಿದ್ದರು.
ಕೊರೊನಾ ಎಫೆಕ್ಟ್.... ಜನತೆಗೆ ‘ಮೈಸೂರು ಮಿರ್ಚಿ’ಯಿಂದ ಉಚಿತ ಊಟ - corona news
ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ, ದಿನಕೂಲಿ ನೌಕರರಿಗೆ ಮತ್ತು ನಿರ್ಗತಿಕರಿಗೆ ಶ್ರುತಿ ನಾಯ್ಡು ಅವರ ‘ಮೈಸೂರು ಮಿರ್ಚಿ’ ಸ್ಪಂದಿಸಿದೆ. ರುಚಿಯಾದ ಆಹಾರವನ್ನು ಶ್ರುತಿ ನಾಯ್ಡು ಹೋಟೆಲ್ ಹಸಿವಿನಿಂದ ನರಳುತ್ತಿರುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಈಗ ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ, ದಿನಗೂಲಿ ನೌಕರರಿಗೆ ಮತ್ತು ನಿರ್ಗತಿಕರ ನೋವಿಗೆ ಶ್ರುತಿ ನಾಯ್ಡು ಅವರ ‘ಮೈಸೂರು ಮಿರ್ಚಿ’ ಸ್ಪಂದಿಸಿದೆ. ರುಚಿಯಾದ ಆಹಾರವನ್ನು ಶ್ರುತಿ ನಾಯ್ಡು ಹೋಟೆಲ್ನಿಂದ ತಯಾರಿಸಿ ಹಸಿವಿನಿಂದ ನರಳುತ್ತಿರುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಮೈಸೂರಿನ ಜಯಲಕ್ಷ್ಮಿ ವಿಲಾಸ್ ರಸ್ತೆಯಲ್ಲಿರುವ ‘ಮೈಸೂರು ಮಿರ್ಚಿ’ ಹೋಟೆಲ್ಗೆ ಬಂದು ತೊಂದರೆಯಲ್ಲಿ ಇರುವವರು ಆಹಾರವನ್ನು ಸೇವಿಸಬಹುದು.
ಮೈಸೂರಿನಲ್ಲಿ ಶ್ರುತಿ ನಾಯ್ಡು ತಂಡದ ಮೈಸೂರು ಮಿರ್ಚಿ ಸದಸ್ಯರುಗಳಾದ ಸತ್ಯನಾರಾಯಣ 9800924832 ಮತ್ತು ರಾಜೇಂದ್ರ 984511 3070 ಅವರನ್ನು ಮೊಬೈಲ್ ಅಲ್ಲಿ ಸಹ ಸಂಪರ್ಕಿಸಿ ಆಹಾರದ ಅಗತ್ಯತತೆಯನ್ನು ನಿರ್ಗತಿಕರು, ಮಕ್ಕಳು, ಹಿರಿಯ ನಾಗರಿಕರು, ದಿನಗೂಲಿ ನೌಕರರು ಉಪಯೋಗವನ್ನು ಪಡೆದುಕೊಳ್ಳಬಹುದು. ಕೆಲವು ಸ್ಥಳಗಳಿಗೆ ಮೈಸೂರು ಮಿರ್ಚಿ ಹೋಟೆಲ್ ತಂಡ ಮನೆ ಬಾಗಿಲಿಗೆ ಊಟದ ವ್ಯವಸ್ಥೆ ಮಾಡಲಿದೆ.