ಕರ್ನಾಟಕ

karnataka

ETV Bharat / state

ಸಂಕ್ರಾಂತಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ: ಸಚಿವ ಶ್ರೀರಾಮುಲು - Latest News For Shriramulu

ಸಂಕ್ರಾಂತಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Shriramulu
ಸಂಕ್ರಾತಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ ಆಗುತ್ತದೆ: ಸಚಿವ ಶ್ರೀರಾಮುಲು

By

Published : Dec 30, 2019, 1:28 PM IST

ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹೋಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುತ್ತದೆ: ಸಚಿವ ಶ್ರೀರಾಮುಲು

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಿಎಂ ಆದ ನಂತರ ಶಿವಸೇನೆ ಕಾರ್ಯಕರ್ತರ ಪುಂಡಾಟ ಹೆಚ್ಚಾಗಿದೆ. ನೆಲ,ಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಗಡಿ ಕ್ಯಾತೆಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹೋರಾಟ ನಿರಂತರವಾಗಿ ನಡೆದಿದೆ. ನಾವು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಕರ್ನಾಟಕದ್ದು. ಆದರೆ, ರಾಜಕೀಯ ಕಾರಣಗಳಿಗೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ, ಅದಕ್ಕೆ ನಾವು ಹೆದರಬೇಕಾದ ಅಗತ್ಯವಿಲ್ಲ. ಶಿವಸೇನೆಯ ಉದ್ಧಟತನಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದರು.

ಏಸು,ಕೃಷ್ಣ ಅಲ್ಲಾಹು ಹಾಗೂ ನಮ್ಮ ಧರ್ಮಗುರುಗಳು ಎಲ್ಲರೂ ಒಂದೇ. ರಾಜಕೀಯ ಕಾರಣಗಳಿಗೆ ದೇವರು ಧರ್ಮದ ಹೆಸರು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.

ಪೌರತ್ವ ಕಾಯ್ದೆ ವಿವಾದ ಹಾಗೂ ಈಗ ಏಸು ಬೆಟ್ಡ ವಿವಾದ ಎರಡಕ್ಕೂ ಲಿಂಕ್ ಇದೆ. ಜನರು ಪ್ರಬುದ್ಧರಾಗಿದ್ದಾರೆ, ಅವರೆಲ್ಲರಿಗೂ ಇದು ಅರ್ಥ ಆಗುತ್ತದೆ. ವೋಟ್​ಗಾಗಿ ಎಲ್ಲವನ್ನೂ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುನಿಸು ಮರೆತು ಇಂದು ಸಚಿವ ಸಂಪುಟ ಸಭೆಗೆ ಶ್ರೀರಾಮುಲು ಹಾಜರಾಗಿದ್ದಾರೆ. ಕಳೆದ ಸಚಿವ ಸಂಪುಟ ಸಭೆಗೆ ಅವರು ಗೈರಾಗಿದ್ದರು. ಹಿರಿಯ ಅಧಿಕಾರಿಗಳ ಜೊತೆಗಿನ ಸಿಎಂ ಸಭೆಯಲ್ಲೂ ಶ್ರೀರಾಮುಲು ಅವರ ಅನುಪಸ್ಥಿತಿ ಕಂಡುಬಂದಿತ್ತು. ಹಲವು ಸಭೆಗಳಿಂದಲೂ ಅವರು ದೂರ ಉಳಿದಿದ್ದರು.

ABOUT THE AUTHOR

...view details