ಬೆಂಗಳೂರು: ನಾಯಕತ್ವ ಬದಲಾವಣೆ ಎಂಬ ಚರ್ಚೆ ನಡೆಯುತ್ತಿರುವಾಗ ಡಿಸಿಎಂ ಹುದ್ದೆ ಮೇಲೆ ಸಚಿವ ಶ್ರೀರಾಮುಲುಗೆ ಆಸೆ ಚಿಗುರೊಡೆದಿದೆ. ನನ್ನನ್ನು ಡಿಸಿಎಂ ಮಾಡುವ ವಿಚಾರವಾಗಿ ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನಂತರ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಪಕ್ಷದ ಬಗ್ಗೆ ನಿಷ್ಠೆ ಇಟ್ಟವರು. ನಾಯಕತ್ವ ವಿಚಾರವಾಗಿ, ಹೆಚ್ ವಿಶ್ವನಾಥ್ ಹೇಳಿಕೆ ಅವರ ವೈಯುಕ್ತಿಕ. ಅದರ ಬಗ್ಗೆ ನಾನು ಮಾತನಾಡಲ್ಲ. ಅಧ್ಯಕ್ಷ ಕಟೀಲ್ ತೆಗೆದುಕೊಳ್ಳೋ ತೀರ್ಮಾನದ ಮೇಲೆ ನಡೆಯೋ ಮಂದಿ ನಾವು ಎಂದರು.