ನೆಲಮಂಗಲ:ಕೇಂದ್ರ ಸರ್ಕಾರದ ಲಾಕ್‌ಡೌನ್‌ಗೆ ಪೀಣ್ಯ ಕೈಗಾರಿಕಾ ವಲಯ ಉತ್ತಮವಾಗಿ ಸ್ಪಂದಿಸುತ್ತಿದೆ. ಸಣ್ಣ ಕೈಗಾರಿಕೆಗಳ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಅದಷ್ಟೂ ಬೇಗ ಸ್ಪಂದಿಸಬೇಕು ಎಂದು ಪೀಣ್ಯಾ ಕೈಗಾರಿಕಾ ವಲಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ರೋಗ ತಡೆಗೆ ಪ್ರಧಾನಮಂತ್ರಿಗಳು ಉತ್ತಮ ಕ್ರಮ ಕೈಗೊಂಡಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಮರುಕ್ಷಣವೇ ಬೃಹತ್ ಪೀಣ್ಯ ಕೈಗಾರಿಕಾ ವಲಯ ಸ್ತಬ್ಧವಾಗಿದೆ. ನಾವು ಕೂಡ ಲಾಕ್‌ಡೌನ್‌ಗೆ ಶೇ. 100ರಷ್ಟು ಸಹಕಾರ ನೀಡಿದ್ದೇವೆ. 8500 ಕೈಗಾರಿಕೆಗಳು ಪೀಣ್ಯ ಕೈಗಾರಿಕಾ ವಲಯದಲ್ಲಿವೆ. ಎಲ್ಲಾ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಕಳೆದ ಆರ್ಥಿಕ ವರ್ಷದಲ್ಲಿ ಆಮೆಗತಿ ಸಾಗಿದ ಆರ್ಥಿಕತೆಯಿಂದಾಗಿ ಕೈಗಾರಿಕೆಗಳು ಕುಗ್ಗಲ್ಪಟ್ಟಿವೆ. ಇದೀಗ ಮತ್ತೆ ಮುಚ್ಚಿರುವುದರಿಂದ ಸಣ್ಣ ಕೈಗಾರಿಕೆಗಳು ಭಾರಿ ಸಂಕಷ್ಟದಲ್ಲಿವೆ ಎಂದು ತಿಳಿಸಿದರು.