ಮಹದೇವಪುರ : (ಬೆಂಗಳೂರು):ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಯುಪಿ ಸಿಎಂ ಆಗಬೇಕು ಎಂದು ಶ್ರೀರಾಮ ಭಕ್ತರು 'ಹೂಡಿ'ಯಿಂದ ಧರ್ಮಸ್ಥಳಕ್ಕೆ 320 ಕಿ.ಮೀ. ಪಾದಯಾತ್ರೆ ಕೈಗೊಂಡರು.
ಸುಮಾರು 25 ಜನರ ತಂಡ ಪಾದಯಾತ್ರೆಯಲ್ಲಿ ಭಾಗಿಯಾಗಿದೆ. 15 ದಿನಗಳ ಕಾಲ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಗೆ ಪಾದಯಾತ್ರೆ ಮೂಲಕ ತೆರಳಿ, ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಮರಳಿ ಬರಬೇಕು ಎಂದು ಜಪಿಸುತ್ತಾ ಹೂಡಿ ಗ್ರಾಮದ ರಾಮಭಕ್ತ ಮಂಜುನಾಥ್ ನೇತೃತ್ವದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.
ಶ್ರೀ ರಾಮಭಕ್ತ ಹೂಡಿ ಮಂಜುನಾಥ್ ಮಾತನಾಡಿದರು 320 ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ಬಹುಮತ ಬರಬೇಕು. ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಸಿಎಂ ಆಗಲೆಂದು ಪಾದಯಾತ್ರೆ ಕೈಗೊಳ್ಳಲಾಗಿದೆ.
ಪಾದಯಾತ್ರೆ ಬಗ್ಗೆ ಶ್ರೀ ರಾಮಭಕ್ತ ಹೂಡಿ ಮಂಜುನಾಥ್ ಮಾತನಾಡಿ, ವಿಶೇಷ ರಥವನ್ನು ನಿರ್ಮಿಸಿ ದೊಡ್ಡ ಶಿವನ ವಿಗ್ರಹವನ್ನು ವಾಹನದ ಮೇಲೆ ನಿರ್ಮಾಣ ಮಾಡಲಾಗಿದೆ. ಇಂದು ಹೂಡಿ ಗ್ರಾಮದಲ್ಲಿ ಬೆಳಗ್ಗೆ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಶ್ರೀ ಧರ್ಮಸ್ಥಳದ ಪಾದಯಾತ್ರೆ ಪ್ರಾರಂಭಿಸಿದ್ದೇವೆಂದು ಹೇಳಿದರು.
ಶ್ರೀರಾಮರ ಕಾರ್ಯವನ್ನು ಯಾರು ಮಾಡುತ್ತಾರೋ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಅಯೋಧ್ಯೆಯಲ್ಲಿ ಶ್ರೀರಾಮರ ಭವ್ಯಮಂದಿರ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಋಣ ತೀರಿಸುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಂಡಿದ್ದೇವೆ. ಶ್ರೀರಾಮ ಮಂದಿರಕ್ಕೆ ಶ್ರಮಿಸಿದವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಸುಮಾರು 15 ದಿನದ ಪಾದಯಾತ್ರೆಯಲ್ಲಿ ಹೂಡಿ ಭಾಗದಿಂದ ಶ್ರೀರಾಮ ಭಕ್ತರಾದ ಕೇಬಲ್ ಮಂಜುನಾಥ್, ಕೆ ಡಿ ವೆಂಕಟೇಶ್, ಇಮ್ಮಡಿಹಳ್ಳಿ ಶ್ರೀನಿವಾಸ್, ಚೆನ್ನಸಂದ್ರ ಕಿರಣ್ ಸೇರಿದಂತೆ ಸುಮಾರು 25 ಜನ ಭಕ್ತರು ಭಾಗಿಯಾಗಿದ್ದರು.
ಓದಿ:ಕುಮಾರ ಷಷ್ಠಿ ಹಿನ್ನೆಲೆ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಹರಿದು ಬಂದ ಭಕ್ತಸಾಗರ