ಬೆಂಗಳೂರು:ಚೀನಾ ದಾಳಿಯಲ್ಲಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದ ಕನ್ನಡ ಪರ ಹೋರಾಟಗಾರರು - ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಚೀನಾ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ಕನ್ನಡ ಪರ ಹೋರಾಟಗಾರರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
![ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದ ಕನ್ನಡ ಪರ ಹೋರಾಟಗಾರರು Shraddanjali for martyrdom warriors](https://etvbharatimages.akamaized.net/etvbharat/prod-images/768-512-09:22-ka-bng-4-namma-karnataka-rakshana-vedhike-ka10012-17062020211912-1706f-1592408952-355.jpg)
Shraddanjali for martyrdom warriors
ಕಂಠೀರವ ಸ್ಟೂಡಿಯೋ ಬಳಿ ಇರುವ ಡಾ. ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಡಲ್ ಹಚ್ಚಿ ಮೌನಾಚರಣೆ ಮಾಡುವ ಮೂಲಕ ಕನ್ನಡ ಪರ ಹೋರಾಟಗಾರರು ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರು ಗಡಿ ಪ್ರದೇಶ ಉಲ್ಲಂಘಿಸಿದ್ದರಿಂದ ಎರಡು ಸೈನ್ಯಗಳ ಮಧ್ಯೆ ಸಂಘರ್ಷ ನಡೆದಿತ್ತು. ಭಾರತದ ಯೋಧರು ಚೀನಾ ಜೊತೆ ಕಾದಾಡಿ 20 ಯೋಧರು ಹುತಾತ್ಮರಾದರು. ಇನ್ನು ಈ ಕಾದಾಟದಲ್ಲಿ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ. ಅಲ್ಲದೇ ಚೀನಾದ ಈ ಕೃತ್ಯಕ್ಕೆ ದೇಶಾದ್ಯಂತ ಅಕ್ರೋಶ ವ್ಯಕ್ತವಾಗುತ್ತಿದೆ.