ಕರ್ನಾಟಕ

karnataka

ETV Bharat / state

ಈ ಬಾರಿಯ ಲಾಕ್​ಡೌನ್​ಗೆ ಸಿಬ್ಬಂದಿಯ ಕೊರತೆ.. ಬರೀ ಬ್ಯಾರಿಕೇಡ್​ಗಳ ಭದ್ರತೆ ಅಷ್ಟೇ..

ಸುಮಾರು 150ಕ್ಕೂ ಹೆಚ್ಚು ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಹಲವಾರು ಪೊಲೀಸ್‌ ಠಾಣೆಗಳು ಸೀಲ್‌ಡೌನ್ ಆಗಿವೆ..

Bangalore
ಬೆಂಗಳೂರು

By

Published : Jul 5, 2020, 5:48 PM IST

ಬೆಂಗಳೂರು :ಸರ್ಕಾರ ಕರ್ಪ್ಯೂ ಅಥವಾ ಲಾಕ್​ಡೌನ್ ಹೇರಿದ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯ ಪ್ರತೀ ಗಲ್ಲಿಗಳಲ್ಲಿ ಪೊಲೀಸರು ಹೊಯ್ಸಳ ಮುಖಾಂತರ ಭದ್ರತೆಗೆ ತಿರುಗುವುದು, ಚೆಕ್​ಪೋಸ್ಟ್ ಬಳಿ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕಾಯೋದು ಮಾಡ್ತಾರೆ.

ಭದ್ರತಾ ಸಿಬ್ಬಂದಿಯಿಲ್ಲದೆ ಖಾಲಿಯಾಗಿರುವ ರಸ್ತೆಗಳು

ಆದರೆ, ಸದ್ಯ ರಸ್ತೆಯ ಬಹುತೇಕ ಗಲ್ಲಿಯಲ್ಲಿ ಬ್ಯಾರಿಕೇಡ್ ಬಿಟ್ಟರೆ ಸಿಬ್ಬಂದಿ ಯಾರೂ ಕಾಣ್ತಿಸ್ತಿಲ್ಲ. ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಣೆ ಮಾಡಿದ ಪೊಲೀಸ್ ಇಲಾಖೆಯಲ್ಲಿ ಕೊರೊನಾ ಅಬ್ಬರಿಸ್ತಿದೆ. ಸುಮಾರು 150ಕ್ಕೂ ಹೆಚ್ಚು ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಹಲವಾರು ಪೊಲೀಸ್‌ ಠಾಣೆಗಳು ಸೀಲ್‌ಡೌನ್ ಆಗಿವೆ.

ಹಾಗೇ ಪ್ರತೀ ಬಾರಿ ಕೆಎಸ್ಆರ್​ಪಿ ತುಕಡಿಗಳು ರಸ್ತೆಗೆ ಇಳಿಯುತ್ತವೆ. ಆದರೆ, ಕೆಎಸ್ಆರ್​ಪಿಯ 50ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ದೃಢವಾಗಿದೆ. ಹೀಗಾಗಿ ಸದ್ಯ ಇರುವ ಸಿಬ್ಬಂದಿಯನ್ನೇ ಬಳಸಿಕೊಳ್ಳುವಂತೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್ ರಾವ್ ಅವರು ಸೂಚನೆ ನೀಡಿರುವ ಕಾರಣ ಸದ್ಯ ಜಂಕ್ಷನ್​ಗಳಲ್ಲಿ ಕೇವಲ ಬ್ಯಾರಿಕೇಡ್ ಮಾತ್ರ ಕಾಣ್ತಿವೆ.

ABOUT THE AUTHOR

...view details