ಕರ್ನಾಟಕ

karnataka

ETV Bharat / state

ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ ಬರ, ಬೆಡ್ ಶೇರಿಂಗ್​​​​​ನಿಂದ ಮಕ್ಕಳಲ್ಲಿ ನ್ಯುಮೋನಿಯಾ!

ಸರ್ಕಾರಿ‌ ಆಸ್ಪತ್ರೆ ಅಂದರೆ ಜನರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯಕ್ಕಿಂತ ಋಣಾತ್ಮಕ ಚಿಂತನೆಗಳೇ ಜಾಸ್ತಿ. ಸರಿಯಾಗಿ‌‌ ಚಿಕಿತ್ಸೆ ನೀಡೋಲ್ಲ, ವೈದ್ಯರು‌ ಇರೋಲ್ಲ, ಮೂಲಭೂತ ಸೌಕರ್ಯಗಳು ಇರೋಲ್ಲ ಎಂಬ ಟೀಕೆಗಳು ಕೇಳಿ ಬರೋದು ಸಹಜ. ಈ ಮಾತಿಗೆ ಪುಷ್ಟಿ ನೀಡುವಂತಿದೆ ಬೆಂಗಳೂರಿನ ವಾಣಿ ವಿಲಾಸ್​​​ ಆಸ್ಪತ್ರೆ.

ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ ಬರ

By

Published : Sep 10, 2019, 4:45 PM IST

ಬೆಂಗಳೂರು:ಸಿಲಿಕಾನ್​ ಸಿಟಿಯ ಹೃದಯ ಭಾಗದಲ್ಲಿರುವ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಿತ್ಯ ನೂರಾರು ಹೆರಿಗೆಗಳು ನಡೆಯುತ್ತವೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮ ವೈದ್ಯರಿದ್ದಾರೆ. ಆದ್ರೆ, ಅಗತ್ಯವಾಗಿ ಬೇಕಾಗಿರುವ ಹಾಸಿಗೆಗಳೇ ಇಲ್ಲ. ಹಾಗಾಗಿ ರೋಗಿಗಳು ಪರದಾಡುವಂತಾಗಿದೆ.

ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಬೆಡ್‌ಗಳಿಗೆ ಬರ ಬಂದಿದ್ದು, ಐಸಿಯು ವಾರ್ಡ್‌ನಲ್ಲಿ ಒಂದು ಬೆಡ್‌ನಲ್ಲಿ ಇಬ್ಬರಿಂದ- ಮೂವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.‌ ಈ ರೀತಿಯ ಬೆಡ್‌ ಶೇರಿಂಗ್‌ನಿಂದ ಮಕ್ಕಳಲ್ಲಿ ನ್ಯುಮೋನಿಯಾ ಹೆಚ್ಚುತ್ತಿದೆ ಅಂತ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಒಂದೇ ಹಾಸಿಗೆಯಲ್ಲಿ 2-3 ಮಕ್ಕಳನ್ನು ಮಲಗಿಸಿದ್ರೆ, ಬೇಗ ಇನ್ಫೆಕ್ಷನ್ ಆಗುತ್ತೆ ಅಂತಾರೆ ಪೋಷಕರು.‌ ಶಿಶುವಿನ ಆರೋಗ್ಯದ ದೃಷ್ಟಿಯಿಂದ ಹಾಸಿಗೆಗಳು ಅನಿವಾರ್ಯವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಸಲು ಪೋಷಕರು ಮನವಿ ಮಾಡುತ್ತಿದ್ದಾರೆ.‌

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ ಬರ

ನ್ಯುಮೋನಿಯಾ ಕಾಯಿಲೆ 5 ವರ್ಷದೊಳಗಿನ‌ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದು, ಇದರಿಂದ ಲಕ್ಷಾಂತರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ.‌ ಈಗಾಗಲೇ ಆಸ್ಪತ್ರೆಯಲ್ಲಿ ಬೆಡ್ ಶೇರಿಂಗ್​​​ನಿಂದ ಮಕ್ಕಳಲ್ಲಿ ಕಾಯಿಲೆ ಹರಡುತ್ತಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಮ್ಮು, ಉಸಿರಾಟ ಹಾಗ ಮತ್ತಿತರ ನಿತ್ಯ ಬಳಸುವ ವಸ್ತುಗಳಿಂದಲೂ ರೋಗ ಹರಡುವುದು ಸಾಮಾನ್ಯವಾಗಿದೆ.

ಈ ಸಂಬಂಧ ವಾಣಿ ವಿಲಾಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಗೀತಾ ಶಿವಮೂರ್ತಿ ಅವರನ್ನು ಸಂಪರ್ಕಿಸಿದರೆ ಅವರು ಉತ್ತರಿಸಲು ನಿರಾಕರಿಸಿದ್ರು. ಇತ್ತ ಆರೋಗ್ಯ ಸಚಿವರು ಸಚಿವರಾದಗಿನಿಂದಲೂ‌ ಖಾಸಗಿ ಆಸ್ಪತ್ರೆಗಳ ಕಡೆ ಮುತುವರ್ಜಿ ವಹಿಸಿದಷ್ಟೂ, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಗಮನಹರಿಸಿಲ್ಲ ಎಂಬ ಆರೋಪವಿದೆ.

ABOUT THE AUTHOR

...view details