ಬೆಂಗಳೂರು: ಭವಿಷ್ಯದ ಪ್ರಮುಖ ಘಟ್ಟ ಎಂದು ಪರಿಗಣಿಸುವ ಎಸ್ಎಸ್ಎಲ್ಸಿ ಪರೀಕ್ಷೆ ಜುಲೈ 19 ಹಾಗೂ 22 ರಂದು ನಡೆಯುತ್ತಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಮಾದರಿ ಬದಲಾಗಿದ್ದು, 6 ದಿನಗಳ ಪರೀಕ್ಷಾ ದಿನವನ್ನು 2 ದಿನಗಳಿಗೆ ಇಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಸಿನಿಮಾ ನಟ-ನಟಿಯರು ಮುಂದೆ ಬಂದಿದ್ದಾರೆ. ಆಲ್ ದಿ ಬೆಸ್ಟ್.. ಬನ್ನಿ ಮಕ್ಕಳೇ ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ.. ಎಂದು ಹಾರೈಸುತ್ತಿದ್ದಾರೆ.
ಹಿರಿಯ ನಟಿ ಅನು ಪ್ರಭಾಕರ್, ನಟ ಕಿರಣ್ ಶ್ರೀನಿವಾಸ್, ನಟ ದೇವ್ ದೇವಯ್ಯ, ನಟಿ ಹಿತಾ ಚಂದ್ರಶೇಖರ್ ಹಾಗೂ ನಟಿ ಸಂಯುಕ್ತಾ ಹೊರನಾಡು ಸೇರಿದಂತೆ ಮತ್ತಿತರ ತಾರೆಯರು ಪರೀಕ್ಷಾ ಕೇಂದ್ರದ ಮುಂದೆ ನಿಂತು ಮಕ್ಕಳನ್ನು ಸ್ವಾಗತಿಸುತ್ತಾ ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ವಿವರಿಸಿದ್ದಾರೆ.