ಬೆಂಗಳೂರು : ವಿದ್ಯುತ್ ಪ್ರವಹಿಸಿ ಖಾಸಗಿ ಕಂಪನಿ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ: ಖಾಸಗಿ ಕಂಪನಿ ಸಿಬ್ಬಂದಿ ಸಾವು - ಖಾಸಗಿ ಕಂಪನಿ ಸಿಬ್ಬಂದಿ ಸಾವು
ಸ್ವಚ್ಚತಾ ಕೆಲಸ ಮಾಡುವಾಗ ಬಿಇಎಲ್ ಫ್ಯಾಕ್ಟರಿಯ ಕಾರ್ಮಿಕ ರವಿಚಂದ್ರ ರೆಡ್ಡಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಘಟನೆಗೆ ಕಂಪನಿಯ ಅಜಾಗರೂಕತೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಖಾಸಗಿ ಕಂಪನಿ ಸಿಬ್ಬಂದಿ ಸಾವು
ಬಿಇಎಲ್ ಫ್ಯಾಕ್ಟರಿಯ ಕಾರ್ಮಿಕ ರವಿಚಂದ್ರ ರೆಡ್ಡಿ ಮೃತ ದುರ್ದೈವಿ.
ಕಂಪನಿಯಲ್ಲಿ 11 ಕೆವಿಎ ಸಬ್ಸ್ಟೇಷನ್ನಲ್ಲಿ ಸ್ವಚ್ಚತಾ ಕಾರ್ಯ ಮಾಡುವಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸುವ 11 ಕೆವಿಎ ಲೈನ್ ಆಫ್ ಮಾಡಿ ಅರ್ತಿಂಗ್ ಮಾಡುವ ಮೂಲಕ ವಿದ್ಯುತ್ ಶಾಕ್ ಆಗದಂತೆ ತಡೆಯಲು ಕ್ರಮ ಕೈಗೊಳ್ಳದ ಪರಿಣಾಮ ತಮ್ಮ ಸತ್ತಿದ್ದಾನೆ ಎಂದುಅಣ್ಣ ಪ್ರಭಾಕರ್ ರೆಡ್ಡಿ ಆರೋಪಿಸಿದ್ದಾರೆ. ಜೊತೆಗೆ ಕಂಪನಿ ವಿರುದ್ಧ ದೂರು ನೀಡಿದ್ದಾರೆ.