ಕರ್ನಾಟಕ

karnataka

ETV Bharat / state

ಜೂನ್ ತಿಂಗಳಿಂದ ಶಾಪಿಂಗ್ ಮಾಲ್​ಗಳಿಗೂ ಅನುಮತಿ ಸಾಧ್ಯತೆ ? - ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆ

ಗುರುವಾರದ ಸಂಪುಟ ಸಭೆಯಲ್ಲಿ ಮಾಲ್ ಚಟುವಟಿಕೆಗಳಿಗೆ ಅನುಮತಿ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Shopping malls
ಜೂನ್ ತಿಂಗಳಿಂದ ಶಾಪಿಂಗ್ ಮಾಲ್​ಗಳಿಗೂ ಅನುಮತಿ ಸಾಧ್ಯತೆ ?

By

Published : May 26, 2020, 5:34 PM IST

Updated : May 26, 2020, 9:38 PM IST

ಬೆಂಗಳೂರು: ನಾಲ್ಕನೇ ಹಂತದ ಲಾಕ್​ಡೌನ್ ಮುಕ್ತಾಯವಾಗುತ್ತಿದ್ದಂತೆ ಷರತ್ತು ಬದ್ದವಾಗಿ ಹಂತ ಹಂತವಾಗಿ ಶಾಪಿಂಗ್ ಮಾಲ್​ಗಳ ಆರಂಭಕ್ಕೆ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ‌.

ಜೂನ್ ತಿಂಗಳಿಂದ ಶಾಪಿಂಗ್ ಮಾಲ್​ಗಳಿಗೂ ಅನುಮತಿ ಸಾಧ್ಯತೆ ?

ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು. ಶಾಪಿಂಗ್ ಮಾಲ್​ಗಳ‌ ಚಟುವಟಿಕೆಗಳಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದರು. ಬೇರೆ ಕಡೆ ಶಾಪಿಂಗ್ ಬದಲು ಮಾಲ್​ಗಳಲ್ಲಿ ಹೆಚ್ಚು ಸೇಫ್ಟಿ ಮಾಡಬಹುದು, ಗ್ರಾಹಕರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸುತ್ತೇವೆ. ರಾಜ್ಯದಲ್ಲಿ ‌ 82 ಮಾಲ್​ಗಳು ಇದ್ದು, ಮಾಲ್ ಓಪನ್​ಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ದೇಶದಲ್ಲಿ 42 ಸಾವಿರ ಕೋಟಿಗೂ ಹೆಚ್ಚು ಲಾಸ್ ಆಗಿದೆ. ರಾಜ್ಯದಲ್ಲೂ ಕೂಡ ಬಾರಿ ನಷ್ಟ ಆಗಿದೆ. ಆದರೆ ಎಷ್ಟು ಅಂತಾ ಅಂದಾಜಿಸೋಕೆ ಆಗಲ್ಲ ತುಂಬಾ ನಷ್ಟ ಆಗಿದೆ ಎಂದು ಅಸೋಸಿಯೇಷನ್ ಸದಸ್ಯ ನಂದೀಶ್ ಮಾಹಿತಿ ನೀಡಿದರು.

ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶಾಪಿಂಗ್ ಮಾಲ್​ಗಳ ಆರಂಭಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಅಸೋಸಿಯೇಷನ್ ಸದಸ್ಯ ನಂದೀಶ್, ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸೇಷನ್, ಆರೋಗ್ಯ ಸೇತು ಅಪ್ ಮುಖೇನ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ. ಮಲ್ಟಿಪ್ಲೆಕ್ಸ್ ಬಗ್ಗೆ ನಾವು ಏನು ಮೆನ್ಷನ್ ಮಾಡಿಲ್ಲ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಕನಿಷ್ಠ ಒಂದು ಪಾಳಿಯಲ್ಲಾದ್ರು ನಮಗೆ ಮಾಲ್ ಒಪನ್ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಎರಡು ಹಂತಗಳಲ್ಲಿ ಶಾಪಿಂಗ್ ಮಾಲ್​ಗಳಲ್ಲಿ ಚಟುವಟಿಕೆಗಳಿಗೆ ಅನುಮತಿ ಸಾಧ್ಯತೆ :

ಮೊದಲ ಹಂತದಲ್ಲಿ ಶಾಪಿಂಗ್ ಮಾಲ್​ಗಳಲ್ಲಿ ಅಗತ್ಯ ವಸ್ತುಗಳು, ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ, ಉಡುಪು ಮಾರಾಟ, ಸ್ಪಾ, ಸೆಲೂನ್ ಷಾಪ್​ಗಳಿಗೆ ಅನುಮತಿ ಸಾಧ್ಯತೆ ಸಾಮಾಜಿಕ ಅಂತರ, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಅಸೀಮಿತ ಸಿಬ್ಬಂದಿ, ಸೀಮಿತ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯಗೊಳಿಸಿ ಅನುಮತಿ ಸಾಧ್ಯತೆ ಇದೆ.

ಎರಡನೇ ಹಂತದಲ್ಲಿ ಹೋಟೆಲ್, ಸ್ನ್ಯಾಕ್ಸ್, ಖಾದ್ಯ ಆಹಾರ ಮಾರಾಟ ಅಂಗಡಿಗಳು, ಸಿನಿಮಾ, ಐನಾಕ್ಸ್​ಗಳಿಗೆ ಅವಕಾಶ ಸಾಧ್ಯತೆ ಇದೆ.

Last Updated : May 26, 2020, 9:38 PM IST

For All Latest Updates

ABOUT THE AUTHOR

...view details