ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಸಿಡಿ ಪ್ರಿಯರು, ಮಂಗಳೂರು ಗಲಭೆ​​​ ವಿಡಿಯೋ ಕಟ್​​​ ಅಂಡ್​​​ ಪೇಸ್ಟ್​: ಶೋಭಾ ಕರಂದ್ಲಾಜೆ ವಾಗ್ದಾಳಿ - Shobha Karandlaje Talking Against To HDK

ಮಂಗಳೂರು ಗಲಭೆ​ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಕಟ್​ ಅಂಡ್​ ಪೇಸ್ಟ್​ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

shobha-karandlaje
ಶೋಭಾ ಕರಂದ್ಲಾಜೆ ಟೀಕೆ

By

Published : Jan 10, 2020, 7:43 PM IST

ಬೆಂಗಳೂರು: ಮಂಗಳೂರು ಗಲಭೆ​ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಕಟ್​ ಅಂಡ್​ ಪೇಸ್ಟ್​ ಮಾಡಲಾಗಿದೆ. ಈ ಕುರಿತು ತನಿಖೆ ನಡೆಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಶೋಭಾ ಕರಂದ್ಲಾಜೆ, ಸಂಸದೆ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಡಿ ಪ್ರಿಯರು. ಕಳೆದ ಆರೇಳು ವರ್ಷಗಳಲ್ಲಿ ಹಲವಾರು ಸಿಡಿ ಬಿಡುಗಡೆ ಮಾಡಿದ್ದಾರೆ. ಆದರೆ ಯಾವ ಸಿಡಿಯಲ್ಲಿನ ವಿಚಾರ ಕೂಡ ಅಂತ್ಯ ಆಗಿಲ್ಲ. ಎಷ್ಟು ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಹುದು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿಗೂ ಮಂಗಳೂರಿಗೂ ಏನು ಸಂಬಂಧ? ಕುಮಾರಸ್ವಾಮಿ ಇಂದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಿದ್ದಾರೆ. ಮಂಗಳೂರು ಪೊಲೀಸರು ಬಿಜೆಪಿ ಸರ್ಕಾರ ಬಂದ ಮೇಲೆ ನೇಮಕವಾದವರಲ್ಲ. ಕುಮಾರಸ್ವಾಮಿ ಅವಧಿಯಲ್ಲೂ ಇದೇ ಕಮೀಷನರ್​ ಕೆಲಸ ಮಾಡಿದ್ದಾರೆ. ನಿಮ್ಮ ಸಿಡಿ ಕಟ್ ಅಂಡ್ ಪೇಸ್ಟ್. ಆ ಸಿಡಿ ಯಾರು ನಿಮಗೆ ತಯಾರು ಮಾಡಿಕೊಟ್ಟರು? ಕೇರಳದಲ್ಲಿ ತಯಾರಾಯ್ತಾ? ಪಶ್ಚಿಮ ಬಂಗಾಳದಲ್ಲಿ ತಯಾರಾಯ್ತಾ? ಅಥವಾ ಜೆಎನ್​ಯುನಲ್ಲಿ ತಯಾರಾಯ್ತಾ ಎಂದು ಪ್ರಶ್ನಿಸಿದರು.

ಇಂದು ಒಂದು ಕೋಮಿನ ವಿರುದ್ಧ ಮತ್ತೊಂದು ಕೋಮನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆಂದು ಮಂಗಳೂರಿಗೆ ಹೋದವರು ಯಾವತ್ತಾದರೂ ಪೊಲೀಸ್ ಠಾಣೆಗೆ ಹೋಗಿದ್ದೀರಾ? ಬಂದರೂ ಠಾಣೆಯ ಪೊಲೀಸರ ಸ್ಥಿತಿ ಯೋಚಿಸದೆ ಹೇಗೆ ಸಿಡಿ ಬಿಡುಗಡೆ ಮಾಡಿದಿರಿ? ಕುಮಾರಸ್ವಾಮಿಗೆ ಇಂದು ಮೃತಪಟ್ಟ ಒಂದು ಕೋಮಿನ ಇಬ್ಬರು ಮಾತ್ರ ಕಾಣ್ತಿದ್ದಾರೆ. ಅವರಿಬ್ಬರು ಅಲ್ಲಿ ಯಾಕೆ ಬಂದಿದ್ದರು ಎಂಬ ಪ್ರಶ್ನೆ ಕೂಡಾ ಇದೆ. ಅವರ ಕುಟುಂಬವನ್ನು ನಾನು ಭೇಟಿ ಮಾಡಿದಾಗ ಫಿಶರೀಸ್ ಕೆಲಸ ಮಾಡಲು ಹೋಗಿದ್ದರು ಎಂದು ಹೇಳಿದ್ದಾರೆ. ಫಿಶರೀಸ್ ಕೆಲಸ ಮಾಡಲು ಹೋದವರು ಅಲ್ಲಿ ಯಾಕೆ ಬಂದಿದ್ದರು ಎಂದರು.

ಮೆಕ್ಕಾದಲ್ಲಿ ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಇಲ್ಲಿ ಸೈತಾನರು ಯಾರು? ಹಾಗಾದರೆ ಮಂಗಳೂರು ಪೊಲೀಸರು ಸೈತಾನರಾ? ಕೇವಲ ರಾಜಕೀಯಕ್ಕಾಗಿ ಕುಮಾರಸ್ವಾಮಿ ರಾಜಕೀಯ ಮಾಡ್ತಿದ್ದಾರೆ. ಇಂತಹದ್ದರಿಂದಲೇ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ನಿಮಗೆ ಸಿಡಿ ಯಾರು ತಯಾರು ಮಾಡಿಕೊಟ್ಟರು ಎಂದು ರಾಜ್ಯಕ್ಕೆ ಹೇಳಬೇಕು. ನಿಮ್ಮಂತಹವರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಇಂತಹ ಘಟನೆ ನಡೆಯುತ್ತಿದೆ. ಕಾಶ್ಮೀರದಲ್ಲಿ ಭಯೋತ್ಪಾದಕರು ಹೇಗೆ ಘೋಷಣೆ ಕೂಗ್ತಾರೋ ಹಾಗೇ ಜೆಎನ್​​ಯುನಲ್ಲಿ ಕೂಗ್ತಾರೆ. ಇಂಥ ದೇಶದ್ರೋಹವನ್ನ ಸಹಿಸ್ಕೊಳ್ಬೇಕಾ? ಜೆಎನ್​​ಯುವನ್ನ ಹಿಂಸೆಯ ಕೂಪ ಮಾಡಿದ್ದೀರಿ. ಅದೇ ಮೈಸೂರಿನಲ್ಲಿ ಆಗ್ತಿದೆ. ಕರ್ನಾಟಕ ನಮಗೆ ಹೇಗೋ ಕಾಶ್ಮೀರ ಕೂಡ ನಮ್ಮ ದೇಶದ ಭಾಗ. ಇದನ್ನ ಸಹಿಸೋ ಪ್ರಶ್ನೆಯೇ ಇಲ್ಲ ಎಂದು ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶನ ಮಾಡಿದವರ ವಿರುದ್ಧ ಹರಿಹಾಯ್ದರು.

ಜೆಎನ್​​ಯು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯದಲ್ಲೂ ಅವಧಿ‌ ಮೀರಿ ವಾಸವಾಗಿವವರನ್ನು ತೆಗೆದು ಹಾಕಬೇಕು. ಅನಧಿಕೃತವಾಗಿ, ಉದ್ಯೋಗ ಇಲ್ದೇ ಹಾಸ್ಟೆಲ್, ಪಿಜಿಗಳಲ್ಲಿ ಯಾರಿದ್ದಾರೆ ಅವರನ್ನು ತೆಗೆದು ಹಾಕಬೇಕು. ಕರ್ನಾಟಕ ಧರ್ಮ ಛತ್ರ ಅಲ್ಲ. ಇದರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಬೇಕು. ಸರ್ವೆ ಮಾಡೋ ಕೆಲಸವನ್ನ ಸರ್ಕಾರ ಮಾಡಬೇಕೆಂದು ಆಗ್ರಹ ಮಾಡಿದರು.

ಕುಮಾರಸ್ವಾಮಿ ಅವರಿಗೆ ಕಾನೂನು ಗೊತ್ತಿರಬೇಕು. ಅವರಿಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ. ಮುಖ್ಯಮಂತ್ರಿಗಳಾದವರು ಅದ್ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ತನಿಖೆ ದಾರಿ ತಪ್ಪಿಸುವ ಕೆಲಸ ಮಾಡಲಾಗ್ತಿದ್ಯಾ? ಮಂಗಳೂರಿನ ಶಾಂತಿ‌ ಕೆಡಿಸಲು ಬರಬೇಡಿ ಕುಮಾರಸ್ವಾಮಿ ಅವರೇ. ಚಿಗುರಿನಲ್ಲೇ ಕತ್ತರಿಸುವ ಕೆಲಸ ಸರ್ಕಾರ ಮಾಡಬೇಕು. ಮಂಗಳೂರನ್ನ ಮತ್ತೊಂದು ಕಾಶ್ಮೀರ ಮಾಡೋಕೆ ಹೊರಟಿದ್ದಾರೆ. ಹಾಗೆ ಆಗೋಕೆ ನಾವು ಬಿಡಲ್ಲ. ಕುಮಾರಸ್ವಾಮಿ ರಾಜಕೀಯ ಬೇಳೆ ಮಂಗಳೂರಿನಲ್ಲಿ ಬೇಯಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ABOUT THE AUTHOR

...view details