ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆ ತರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಿದ್ದು ವಿದೇಶಾಂಗ ಇಲಾಖೆ ಈ ನಿಟ್ಟಿನಲ್ಲಿ ವಿಶೇಷವಾದ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅಫ್ಘನ್ನಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲು ಅಗತ್ಯ ಕ್ರಮ ಕೈಗೊಳಲಾಗಿದೆ: ಕರಂದ್ಲಾಜೆ - Shobha karandlaje News
ಅಫ್ಘನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂಕವಾದ ಭಯೋತ್ಪಾದಕತೆ ಎಂದರೇನು ಎಂದು ಪ್ರಪಂಚಕ್ಕೆ ಅಫ್ಘಾನಿಸ್ತಾನ ಇಂದು ಪರಿಚಯ ಮಾಡಿಕೊಟ್ಟಿದೆ. ಭಯೋತ್ಪಾದಕತೆ ಎಲ್ಲಿ ಮೀರಿದರೆ ಯಾವ ರೀತಿ ಒಂದು ದೇಶವನ್ನು ನಾಶ ಮಾಡಬಹುದು ಎನ್ನುವುದಕ್ಕೆ ಅಫ್ಘಾನಿಸ್ತಾನ ತಾಜಾ ಉದಾಹರಣೆಯಾಗಿದೆ ಎಂದರು.
ಈ ಹಿಂದೆಯೇ ಅಫ್ಘಾನಿಸ್ತಾನದಿಂದ ವಾಪಸ್ ಬರುವಂತೆ ಎಚ್ಚರಿಸಿದ್ದೆವು. ಆದರೆ ಕೆಲವರು ಬಂದಿಲ್ಲ. ಅಲ್ಲಿ ಯಾರೇ ಭಾರತೀಯರು ಸಿಲುಕಿದ್ದರೂ ಕೂಡ ತಕ್ಷಣ ಅವರನ್ನು ಭಾರತಕ್ಕೆ ಕರೆತರಲು ಸರ್ಕಾರ ಮುಂದಾಗಿದೆ. ವಿಶೇಷವಾಗಿ ನಮ್ಮ ವಿದೇಶಾಂಗ ಸಚಿವಾಲಯ ಕ್ರಮಕೈಗೊಳ್ಳಲಿದೆ ಎಂದರು.