ಕರ್ನಾಟಕ

karnataka

ETV Bharat / state

ಸೋಲುವ ಭಯದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ ಗೂಂಡಾಗಿರಿ: ಶೋಭಾ ಕರಂದ್ಲಾಜೆ - ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್​ ರಕ್ತ, ವಿಚಾರ ಮತ್ತು ಸಂಸ್ಕೃತಿಯೇ ಮೋದಿಯನ್ನು ಟೀಕಿಸುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ
ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ

By

Published : May 1, 2023, 4:25 PM IST

ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿಕೆ

ಬೆಂಗಳೂರು : ವರುಣ ಕ್ಷೇತ್ರದಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಹತಾಶರಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ. ಗೂಂಡಾಗಿರಿ ರಾಜಕಾರಣದ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಭಯಪಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಇಂದು ಪ್ರಣಾಳಿಕೆ ಬಿಡುಗಡೆ ಸಮಾರಂಭದ ನಂತರ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದಾರೆ. ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದಿದ್ದರೂ ಅವರಿಗೆ ಒಂದೇ ಸ್ಥಾನ ಸಿಕ್ಕಿದೆ. ಸೋಲುವ ಭೀತಿಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಹಲ್ಲೆ ಮಾಡುತ್ತಿದೆ. ಇದು ಖಂಡನೀಯ, ಚುನಾವಣೆಯನ್ನು ಚುನಾವಣೆಯಂತೆ ಎದುರಿಸಿ, ಗೂಂಡಾಗಿರಿ ಮಾಡಬೇಡಿ. ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ ಈ ರೀತಿ ಗೂಂಡಾಗಿರಿ ಮಾಡಬೇಕಾದ ಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ರಕ್ತ, ವಿಚಾರ ಮತ್ತು ಸಂಸ್ಕೃತಿಯೇ ಮೋದಿಯನ್ನು ಟೀಕಿಸುವುದಾಗಿದೆ. ಪ್ರಧಾನಿ ಸ್ಥಾನ ನೆಹರೂ ಕುಟುಂಬದ ಆಸ್ತಿ ಎನ್ನುವಂತಾಗಿದೆ. ಮೋದಿ ಪ್ರಧಾನಿಯಾಗಿರುವುದರಿಂದಾಗಿ ನೆಹರೂ ಕುಟುಂಬದ ಆಸ್ತಿಯನ್ನು ಯಾರೋ ಕಬಳಿಸಿದಂತಾಗಿದೆ. ಹಾಗಾಗಿ ಅವರು ಮೋದಿ ವಿರುದ್ಧ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರ ಮೋದಿ ವಿರುದ್ಧ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ. ಇದಕ್ಕೆ ಜನ ಪಾಠ ಕಲಿಸಲಿದ್ದಾರೆ. ಚುನಾವಣೆಯಂದು ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಿಯಾಂಕ್ ಖರ್ಗೆಗೆ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹಾಗಾಗಿ ಪ್ರಧಾನಿಗಳ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಜನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಮೋದಿ ರಾಜ್ಯಕ್ಕೆ ಬಂದ ತಕ್ಷಣ ಸುನಾಮಿಯಂತಾಗಿದೆ. ಕಾಂಗ್ರೆಸ್​ನ ರಾಜಕೀಯ ಲೆಕ್ಕಾಚಾರ ಬದಲಾಗಿದೆ. 120 ಸ್ಥಾನದ ನಿರೀಕ್ಷೆಯಲ್ಲಿದ್ದವರಿಗೆ ಈಗ 50 ಸ್ಥಾನಕ್ಕೆ ಕುಸಿಯುವ ಭೀತಿಗೆ ಸಿಲುಕಿ ವಿಚಲಿತರಾಗಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂಧಿಗೆ ಪಪ್ಪು ಎಂದು ಕರೆದಿದ್ದು ಬಿಜೆಪಿಯಲ್ಲ. ನವಜೋತ್ ಸಿಂಗ್ ಸಿಧು. ರಾಹುಲ್ ಗಾಂಧಿನ ಪಪ್ಪು ಅಂದರು. ಮೋದಿ ಬಗ್ಗೆ ಎಷ್ಟೆಲ್ಲ ಮಾತನಾಡಿದ್ದರೂ ನಾವು ಸುಮ್ಮನಿದ್ದೇವೆ. ಕಮಲ ಕೆಸರಿನಲ್ಲೇ ಇರಲಿದೆ. ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ ನಾವು ಬೆಳೆಯುತ್ತಲೇ ಇರುತ್ತೇವೆ ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾಗಿದೆ ಅನ್ನಿಸುತ್ತಿದೆ. ಸೋಲುವ ವಾಸನೆ ಅವರಿಗೆ ಬಂದಿದೆ. ಬಾದಾಮಿ ಬಿಟ್ಟು ಕೋಲಾರ, ಚಾಮರಾಜಪೇಟೆ, ಕೊಪ್ಪಳ ಎಲ್ಲವೂ ಆಗಿ ಕಡೆಗೆ ವರುಣಗೆ ಹೋಗಿದ್ದಾರೆ. ಒಕ್ಕಲಿಗ, ಲಿಂಗಾಯತ, ಎಸ್ಸಿ ಎಸ್ಟಿ ಸೇರಿ ಎಲ್ಲ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ಸೋಲಿನ ಭೀತಿಗೆ ಸಿಲುಕಿದ್ದಾರೆ. ಇದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಇದು ಪ್ರಜಾಪ್ರಭುತ್ವವಾ? ನಿಮ್ಮ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ :ನಮ್ಮದು 224 ಕ್ಷೇತ್ರಗಳ ಜನಾಭಿಪ್ರಾಯದ ಪ್ರಜಾ ಪ್ರಣಾಳಿಕೆ: ಸಿಎಂ ಬೊಮ್ಮಾಯಿ

ABOUT THE AUTHOR

...view details