ಬೆಂಗಳೂರು:ಪತ್ರಕರ್ತರ ಮೇಲೆ ಗೂಂಡಾಗಿರಿಯ ವರ್ತನೆ ತೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ ಅವರು ಡಿ ಕೆ ಶಿವಕುಮಾರ್ ವಿರುದ್ಧ ಎರಡು ದೂರುಗಳನ್ನು ಸಲ್ಲಿಕೆ ಮಾಡಿದರು.
ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದರು. ಕೆಲ ಪತ್ರಕರ್ತರು ಡಿಕೆಶಿ ಮಾಧ್ಯಮಗೋಷ್ಟಿಗೆ ಬಂದಿಲ್ಲ, ‘ಬಾರದವರ ಹೆಸರು ಬರೆದುಕೊಳ್ಳಿ. ಅವರ ಮ್ಯಾನೇಜ್ಮೆಂಟ್ ಜೊತೆ ಮಾತಾಡ್ತೀನಿ ಎಂದು ತಿಳಿಸಿದ ಶಿವಕುಮಾರ್, ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮರೆತು ನಾನು ಪತ್ರಕರ್ತರನ್ನ ಕೊಂಡುಕೊಳ್ಳಬಲ್ಲೆ ಎಂದಿದ್ದಾರೆ. ಅವರ ಮ್ಯಾನೇಜ್ಮೆಂಟ್ ಹೇಳಿ ಕೆಲಸದಿಂದ ತೆಗೆಸುತ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.