ಕರ್ನಾಟಕ

karnataka

ETV Bharat / state

ಹಣ ಪಡೆದು ಬಿ ಫಾರಂ ವಿತರಣೆ ಆರೋಪ : ಡಿಕೆಶಿ, ಕಾಂಗ್ರೆಸ್​ ಅಭ್ಯರ್ಥಿಗಳ ವಿರುದ್ಧ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು

ಹಣ ಪಡೆದು ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದಾರೆ ಎಂದು ಆರೋಪಿಸಿ ಡಿ ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ದೂರು ನೀಡಿದೆ.

Etv Bharatshobha-karandlaje-complains-to-election-commission-against-congress
ಹಣ ಪಡೆದು ಬಿ ಫಾರಂ ವಿತರಿಸಿದ ಡಿಕೆಶಿ: ಕಾಂಗ್ರೆಸ್​ ಅಭ್ಯರ್ಥಿಗಳ ವಿರುದ್ಧ ಚು.ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು

By

Published : Apr 21, 2023, 4:49 PM IST

Updated : Apr 21, 2023, 5:03 PM IST

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಹಣ ಪಡೆದುಕೊಂಡು ಬಿ ಫಾರಂ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ದೂರು ನೀಡಿದೆ. ಶುಕ್ರವಾರ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ ನಿಯೋಗ,‌ ಬಿಫಾರಂ ನೀಡಲು ಅರ್ಜಿ ಸಲ್ಲಿಕೆ ಮಾಡಿದವರಿಂದ ಅರ್ಜಿ ಜೊತೆಗೆ ಎರಡು ಲಕ್ಷ ರೂಪಾಯಿ ಪಡೆದುಕೊಳ್ಳಲಾಗಿದೆ. ಇದು ಜನಪ್ರತಿನಿಧಿ ಕಾಯಿದೆ 79 ಡಿ ಹಾಗೂ ಐಪಿಸಿ 171 ಡಿ ಪ್ರಕಾರ ಕಾನೂನು ಬಾಹಿರವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಡಿಕೆಶಿ ಹಾಗೂ ಕಾಂಗ್ರೆಸ್ ಪಕ್ಷ ಮುಕ್ತ ಹಾಗೂ ಪಾರದರ್ಶಕ ಚುನಾವಣಾ ಹಕ್ಕಿನಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳಿಂದ ಹಣ ಪಡೆದು ಬಿ‌ ಫಾರ್ಮ್ ಕೊಡುತ್ತಿರುವುದು ಕಾನೂನು ಬಾಹಿರ ಎಂದು ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ಆರೋಪ ಮಾಡಿದೆ.

ದೂರು ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು ಆಗಿರುವ ಶೋಭಾ ಕರಂದ್ಲಾಜೆ, ಕಾನೂನು ಪ್ರಕಾರ ಚುನಾವಣೆಯಲ್ಲಿ ಅಭ್ಯರ್ಥಿಗಳು ಬಿ ಫಾರಂ ಪಡೆದುಕೊಳ್ಳಲು ಹಣ ಕೊಡುವ ಹಾಗಿಲ್ಲ. ಅದು ಲಂಚ ಆಗುತ್ತದೆ. ಜನಪ್ರತಿನಿಧಿ ಕಾಯ್ದೆ ಅಡಿ ಲಂಚ ಪಡೆದುಕೊಳ್ಳುವುದು ಹಾಗೂ ಕೊಡುವುದು ಅಪರಾಧ ಆಗುತ್ತದೆ. ಅರ್ಜಿ ಜೊತೆಗೆ ಹಣ ಪಡೆದುಕೊಂಡು ಬಿ ಫಾರಂ ವಿತರಣೆ ಮಾಡಿದ್ದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಬಿ ಫಾರಂ ಅನೂರ್ಜಿತಗೊಳಿಸಬೇಕು. ಈ ಕಾರಣಕ್ಕಾಗಿ ಕಾಂಗ್ರೆಸ್​ನ 223 ಅಭ್ಯರ್ಥಿಗಳ ಬಿ ಫಾರಂ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಚುನಾವಣಾ ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ನೀಡುವ ಸಂದರ್ಭದಲ್ಲಿ ಪ್ರತಿಯೊಬ್ಬರಿಂದ ಎರಡು ಲಕ್ಷ ರೂಪಾಯಿ ಸಂಗ್ರಹ ಮಾಡಲಾಗಿತ್ತು. ಈ ಹಣವನ್ನು ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಎರಡು ಲಕ್ಷ ರೂ. ಲಂಚ ನೀಡಿರುವ ಅಭ್ಯರ್ಥಿಗಳು ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಆ ರೀತಿ ಹಣ ಪಡೆದು ಅಭ್ಯರ್ಥಿಗಳಿಗೆ ನೀಡಿದ ಬಿ ಫಾರಂನ್ನು ತಿರಸ್ಕರಿಸಬೇಕು. ಲಂಚ ಪಡೆದು ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿರುವುದು ಕಾನೂನು ಬಾಹಿರವಾಗಿದೆ. ಸುಮಾರು 1,350 ಟಿಕೆಟ್ ಆಕಾಂಕ್ಷಿಗಳಿಂದ ಹಣ ಪಡೆದು ಸುಮಾರು 23 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಹೊಣೆಗಾರಿಕೆ ಹೊಂದಿರುವ ಚುನಾವಣಾ ಆಯೋಗ ಕೆಪಿಸಿಸಿ ಅಧ್ಯಕ್ಷ ಹಾಗೂ ಟಿಕೆಟ್ ಪಡೆಯಲು ಲಂಚ ನೀಡಿದ ಕೈ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೈ ಅಭ್ಯರ್ಥಿಗಳ ಬಿ ಫಾರಂನ್ನು ತಿರಸ್ಕರಿಸುವಂತೆ ನಿಯೋಗ ಚುನಾವಣಾ ಆಯೋಗವನ್ನ ಒತ್ತಾಯಿಸಿದೆ.

ಇದನ್ನೂ ಓದಿ:ಹೈಕೋರ್ಟ್​ನಲ್ಲೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅರ್ಜಿ ವಜಾ: ಧಾರವಾಡ ಪ್ರವೇಶಕ್ಕಿಲ್ಲ ಅನುಮತಿ

Last Updated : Apr 21, 2023, 5:03 PM IST

ABOUT THE AUTHOR

...view details