ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
ಉಪ ಚುನಾವಣಾ ಪ್ರಚಾರ: ಸಿಎಂ ಜೊತೆ ಶ್ರೀನಿವಾಸ ಪೂಜಾರಿ, ಶೋಭಾ ಕರಂದ್ಲಾಜೆ ಚರ್ಚೆ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಬಿಎಸ್ವೈ ಜೊತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಮಾತುಕತೆ ನಡೆಸಿದರು.
ಸಿಎಂ ನಿವಾಸಕ್ಕೆ ಶೋಭಾ ಕರಂದ್ಲಾಜೆ, ಶ್ರೀನಿವಾಸ ಪೂಜಾರಿ ಭೇಟಿ
ಉಪ ಚುನಾವಣಾ ಪ್ರಚಾರ ಸಂಬಂಧ ಮಾತುಕತೆ ನಡೆಸಿದ ಅವರು, ನಂತರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಚಾರಕ್ಕೆ ತೆರಳಿದರು. ಪಕ್ಷದ ಅಭ್ಯರ್ಥಿ ಶರವಣ ಪರ ಸಿಎಂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸಿಎಂಗೆ ಶೋಭಾ ಕರಂದ್ಲಾಜೆ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಸಾಥ್ ನೀಡಿದ್ದಾರೆ.
ಶತಾಯಗತಾಯ ಶಿವಾಜಿನಗರ ಅಭ್ಯರ್ಥಿ ಗೆಲ್ಲಿಸಲು ಸಿಎಂ ಹರಸಾಹಸ ಪಡುತ್ತಿದ್ದು ಮೂರನೇ ಬಾರಿಗೆ ಪ್ರಚಾರಕ್ಕೆ ತೆರಳಿದ್ದಾರೆ.