ಬೆಂಗಳೂರು:ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧರೊಬ್ಬರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸ್ವತಃ ಕಾರಿನಿಂದ ಇಳಿದು ರಸ್ತೆ ಮೇಲಿದ್ದ ವೃದ್ಧನಿಗೆ ಶಿವಣ್ಣ ನೆರವು.. ಇವನು ದಯಾಮಯಿ 'ವಾಲ್ಮೀಕಿ'! - latest news of shivrajkumar
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧರೊಬ್ಬರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಶಿವ್ರಾಜ್ಕುಮಾರ್ ಮಾನ್ಯತ ಟೆಕ್‌ಪಾರ್ಕ್ ಬಳಿಯ ನಿವಾಸದ ಬಳಿ ಕಾರಿನಲ್ಲಿ ಹೋಗುತ್ತಿದ ವೇಳೆ, ಬಿಸಿಲಿನಲ್ಲಿ ನಿಂತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಗಮನಿಸಿದ್ದಾರೆ. ಸ್ವತಃ ಕಾರ್ ಚಲಾಯಿಸುತ್ತಿದ್ದ ಶಿವ್ರಾಜ್ಕುಮಾರ್, ಕಾರು ರಿವರ್ಸ್ ತೆಗೆದು ವಾಪಸ್ ವೃದ್ಧ ಇದ್ದ ಜಾಗಕ್ಕೆ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದು ವೃದ್ಧನಿಗೆ ನೀಡಿದ್ದಾರೆ.
ವೃದ್ಧನನ್ನು ನೋಡಿ ಸಹಾಯ ಮಾಡಿ ಮಾನವೀಯತೆ ಮೆರೆದ ಶಿವಣ್ಣರನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸದ್ಯ ಶಿವಣ್ಣ ಕಾರು ನಿಲ್ಲಿಸಿ ವೃದ್ಧನಿಗೆ ಹಣಕೊಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.