ಕರ್ನಾಟಕ

karnataka

ETV Bharat / state

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ: ಶಿವರಾಮ್​ ಹೆಬ್ಬಾರ್ - yallapura mla

ಬಿಜೆಪಿ ಮೇಲಿದ್ದ ಜನರ ನಂಬಿಕೆ, ನಾನು ಮಾಡಿದ್ದ ಅಭಿವೃದ್ಧಿ ಕೆಲಸವೇ ಉಪಚುನಾವಣೆಯಲ್ಲಿ ನನ್ನ ಕೈಹಿಡಿದಿದೆ. ನಾವು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇವೆ. ಉತ್ತಮ ಮತಗಳ ಅಂತರದಿಂದ ಗೆದ್ದಿದ್ದೇವೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

bng
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದರು.

By

Published : Dec 12, 2019, 3:42 PM IST

ಬೆಂಗಳೂರು:ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಯಾವ ಖಾತೆ ಕೊಡುತ್ತಾರೆ ಅನ್ನೋದು ಗೊತ್ತಿಲ್ಲ ಎಂದರು.

ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್ ಮಾತನಾಡಿದರು.

ಇನ್ನು ಬಿಜೆಪಿ ಮೇಲಿದ್ದ ಜನರ ನಂಬಿಕೆ, ನಾನು ಮಾಡಿದ್ದ ಅಭಿವೃದ್ಧಿ ಕೆಲಸಗಳು ಉಪಚುನಾವಣೆಯಲ್ಲಿ ನನ್ನ ಕೈಹಿಡಿದಿವೆ. ನಾವು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇವೆ. ಉತ್ತಮ ಮತಗಳ ಅಂತರದಿಂದ ಗೆದ್ದಿದ್ದೇವೆ. ಬೇರೆ ಯಾವುದರ ಬಗ್ಗೆಯೂ ಈಗ ಮಾತನಾಡಲ್ಲ. ದೇಶಪಾಂಡೆಯವರು ಸೋಲಿಸೋ ಪ್ರಯತ್ನ ಮಾಡಿದ್ದು ಗೊತ್ತಿಲ್ಲ. ಪಾರ್ಟಿ ಬಿಟ್ಟ ಮೇಲೆ ಈ ವಿಚಾರ ಈಗೇಕೆ? ಈಗ ಎಲ್ಲವೂ ಮುಗಿದ ಕಥೆ ಎಂದು ಹೆಬ್ಬಾರ್​ ಹೇಳಿದ್ರು.

ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಗೊತ್ತಿಲ್ಲ. ನೀವು ಸಿಎಂ ಅವರನ್ನೇ ಕೇಳಿ ಎಂದು ಇದೇ ವೇಳೆ ಹೆಬ್ಬಾರ್ ತಿಳಿಸಿದರು.

ABOUT THE AUTHOR

...view details