ಕರ್ನಾಟಕ

karnataka

ETV Bharat / state

ವಕೀಲರೊಂದಿಗೆ ವಿಚಾರಣೆಗೆ ಹಾಜರಾದ ಶಿವಪ್ರಕಾಶ್ ಚಿಪ್ಪಿ - ಬೆಂಗಳೂರು ಸುದ್ದಿ

ಶಿವಪ್ರಕಾಶ್ ಚಿಪ್ಪಿ
ಶಿವಪ್ರಕಾಶ್ ಚಿಪ್ಪಿ

By

Published : Jan 7, 2021, 12:57 PM IST

Updated : Jan 7, 2021, 1:18 PM IST

12:46 January 07

ಡ್ರಗ್ಸ್​ ನಂಟು ಆರೋಪ ಪ್ರಕರಣದ ‌ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ವಕೀಲರ ಜೊತೆ ಆಗಮನ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾನೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ‌ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸಿಸಿಬಿ ಕಚೇರಿಗೆ ವಕೀಲರೊಂದಿಗೆ ಆಗಮಿಸಿದ್ದಾನೆ.

ಪ್ರಕರಣದ ‌ಮೊದಲ ಆರೋಪಿಯಾಗಿದ್ದ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿಗಾಗಿ ಈ ಹಿಂದೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದರು. ಆದರೆ, ಚಿಪ್ಪಿ ಕಳೆದ 15 ದಿನಗಳ ಹಿಂದೆ ಕೋರ್ಟ್​ನಿಂದ ನೋ ಕ್ವೋರ್ಸಿವ್ ಆರ್ಡರ್ (ಪೊಲೀಸರು ಬಂಧಿಸದಂತೆ) ಪಡೆದಿದ್ದ.

ಇದನ್ನು ಓದಿ: ಅಮಿತಾಬ್ ಬಚ್ಚನ್ ಧ್ವನಿಯಲ್ಲಿನ ಕೋವಿಡ್-19​ ಕಾಲರ್ ಟ್ಯೂನ್ ತೆರೆವಿಗೆ ಪಿಐಎಲ್ ಸಲ್ಲಿಕೆ

ಇದಾದ ಬಳಿಕ  ಎರಡು ದಿನಗಳ ಹಿಂದೆ ಸಿಸಿಬಿ ಕಚೇರಿಗೆ ಆಗಮಿಸಿದ್ದ. ಇನ್ನು ನಿನ್ನೆ ಸಂಜೆ 6:30ರ ಸಂದರ್ಭದಲ್ಲಿ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಬಂದಿದ್ದು, ಈ ವೇಳೆ ತನಿಖಾಧಿಕಾರಿ ಇಲ್ಲದ ಕಾರಣ ವಾಪಸ್ ತೆರಳಿದ್ದಾನೆ. ಬಳಿಕ ಮತ್ತೆ ತನಿಖಾಧಿಕಾರಿ ಪುನೀತ್​ ಅವರು ನೋಟಿಸ್​ ಜಾರಿ ಮಾಡಿದ್ದು, ಇದೀಗ ವಕೀಲರ ಜೊತೆ ವಿಚಾರಣೆಗೆ ಹಾಜರಾಗಿದ್ದಾನೆ. 

Last Updated : Jan 7, 2021, 1:18 PM IST

ABOUT THE AUTHOR

...view details