ಕರ್ನಾಟಕ

karnataka

ETV Bharat / state

ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆ ವೇಳಾಪಟ್ಟಿಗೆ ವಿಧಿಸಿದ್ದ ನಿರ್ಬಂಧ ವಿಸ್ತರಿಸಿದ ಹೈಕೋರ್ಟ್

ಶಿವಮೊಗ್ಗ ನಗರ ಪಾಲಿಕೆ ಮೇಯರ್ ಹುದ್ದೆ ಚುನವಾಣೆ. ನಿರ್ಬಂಧ ವಿಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್.

By

Published : Sep 6, 2022, 8:37 PM IST

ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆ
ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆ

ಬೆಂಗಳೂರು:ಶಿವಮೊಗ್ಗ ನಗರ ಪಾಲಿಕೆ ಮೇಯರ್ ಹುದ್ದೆ ಚುನವಾಣೆ ನಡೆಸಲು ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಸೆ‌.13ರವರೆಗೆ ವಿಸ್ತರಿಸಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲು ಕಲ್ಪಿಸಿಲ್ಲ. ಇದು ಕಾನೂನು ಬಾಹಿರ ಕ್ರಮ ಎಂದು ಆಕ್ಷೇಪಿಸಿ ನಗರ ಪಾಲಿಕೆ ಸದಸ್ಯ ಡಿ.ನಾಗರಾಜ್ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಹೇಮಂತ್ ಚಂದನಗೌಡ ಅವರಿದ್ದ ಪೀಠ, ನಿರ್ಬಂಧವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು.

ಅರ್ಜಿಯನ್ನು ಸೆ.3ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಶಿವಮೊಗ್ಗ ನಗರ ಪಾಲಿಕೆ ಮೇಯರ್ ಹುದ್ದೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಿತ್ತು. ವಿಚಾರಣೆ ವೇಳೆ, ಮೇಯರ್ ಹುದ್ದೆಯನ್ನು ಈವರೆಗೆ ಪರಿಶಿಷ್ಟ ಜಾತಿ (ಮಹಿಳೆ), ಸಾಮಾನ್ಯ ವರ್ಗ, ಹಿಂದುಳಿದ ವರ್ಗ (ಎ), ಹಿಂದುಳಿದ ವರ್ಗ (ಮಹಿಳೆ), ಹಿಂದುಳಿದ ವರ್ಗ ಎ (ಮಹಿಳೆ) ಗೆ ಮೀಸಲು ಕಲ್ಪಿಸಲಾಗಿದೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲು ಒದಗಿಸಿಲ್ಲ ಎಂದು ವಾದ ಮಂಡಿಸಿದ್ದರು.

ವೇಳಾಪಟ್ಟಿ ಹಿಂಪಡೆದ ಸರ್ಕಾರ ಶಿವಮೊಗ್ಗ ನಗರ ಪಾಲಿಕೆ ಮೇಯರ್ ಹುದ್ದೆಗೆ ಚುನಾವಣೆಗಾಗಿ ಆ.20 ರಂದು ಪ್ರಕಟಿಸಲಾಗಿದ್ದ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ. ಈ ಕುರಿತು ರಾಜ್ಯ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರು ಸೆ.5ರಂದು ಆದೇಶಿಸಿದ್ದಾರೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

(ಇದನ್ನೂ ಓದಿ: ಮೈಸೂರು ಪಾಲಿಕೆ ಚುಕ್ಕಾಣಿ ಹಿಡಿದ ಬಿಜೆಪಿ.. ಮೇಯರ್​ ಶಿವಶಂಕರ್​, ಉಪ ಮೇಯರ್ ಬಿ​ ರೂಪ)

ABOUT THE AUTHOR

...view details