ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಶಿವಮೊಗ್ಗ ಏರ್​ಪೋರ್ಟ್ ನಿರ್ಮಾಣ ಕಾರ್ಯ: ಸಿಎಂ - ಶಿವಮೊಗ್ಗ ಏರ್​ಪೋರ್ಟ್

ಪ್ರವಾಹ ಹಿನ್ನೆಲೆಯಲ್ಲಿ ಶಿಕಾರಿಪುರದ ಕೆಲವು ಕಡೆ ಹೋಗಿ ಬಂದಿದ್ದೇನೆ. ಸೊರಬ, ಸಾಗರ ಮುಗಿಸಿ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ಕರೆದಿದ್ದೇನೆ ಎಂದು ಸಿಎಂ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

By

Published : Aug 13, 2019, 5:51 PM IST

ಶಿವಮೊಗ್ಗ: ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ಅಗತ್ಯವಿದ್ದು, ಕೈಗಾರಿಕೋದ್ಯಮಿಗಳು ಬರಲಿಕ್ಕೆ ತುಂಬಾ ಅನುಕೂಲವಾಗಲಿದೆ. ವಿಮಾನ ನಿಲ್ದಾಣ ಕೆಲಸ ಪ್ರಾರಂಭಿಸಲು ಸರ್ಕಾರದಿಂದ 40 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೈಗಾರಿಕೋದ್ಯಮಿಗಳಿಗೆ ಸಮಯ ಬಹಳ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಪ್ರವಾಹ ಹಿನ್ನೆಲೆಯಲ್ಲಿ ಶಿಕಾರಿಪುರದ ಕೆಲವು ಕಡೆ ಹೋಗಿ ಬಂದಿದ್ದೇನೆ. ಸೊರಬ, ಸಾಗರ ಮುಗಿಸಿ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ಕರೆದಿದ್ದೇನೆ.

ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಪ್ರತಿಕ್ರಿಯೆ
ಅಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನೆರೆಗೆ ಯಾವ ರೀತಿಯ ಪರಿಹಾರ ಹುಡುಕಬಹುದು ಎಂದು ತಿರ್ಮಾನ ಮಾಡುತ್ತೇನೆ ಎಂದರು.

ಇನ್ನು ಶಾಸಕರ ಮೇಲಿನ ಫೋನ್ ಕದ್ದಾಲಿಕೆ ಆರೋಪದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅದರಲ್ಲಿ ಸತ್ಯಾಂಶ ಇಲ್ಲ. ಯಾರ ಬಗ್ಗೆಯೂ ಆಧಾರರಹಿತ ಆರೋಪ ಮಾಡಲು ನನಗೆ ಇಷ್ಟ ಇಲ್ಲ ಎಂದು ಸಿಎಂ ಹೇಳಿದರು. ಹಾಗೆಯೇ 16ರಂದು ದೆಹಲಿಗೆ ಹೋಗಿ ಬಂದ ನಂತರ ಸಚಿವ ಸಂಪುಟ ರಚನೆ ಮಾಡಲಾಗವುದು ಎಂದು ತಿಳಿಸಿದರು.

ABOUT THE AUTHOR

...view details