ಬೆಂಗಳೂರು:ಶಿವಾಜಿನಗರದ ರಸೆಲ್ ಮಾರುಕಟ್ಟೆಯನ್ನು ಇಂದಿನಿಂದ ಕೊರೊನಾ ಲಾಕ್ಡೌನ್ ಮುಗಿಯುವ 14 ನೇ ತಾರೀಕಿನವರೆಗೂ ಸಂಪೂರ್ಣವಾಗಿ ಬಂದ್ ಮಾಡುವಂತೆ ಪೂರ್ವ ವಿಭಾಗದ ಜಂಟಿ ಆಯುಕ್ತರು ಆದೇಶಿಸಿದ್ದಾರೆ.
ಶಿವಾಜಿನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್: ರಸ್ತೆಗಳು ಖಾಲಿ - ರಸೆಲ್ ಮಾರ್ಕೆಟ್ ಬಂದ್ ನ್ಯೂಸ್
ಪೂರ್ವ ವಿಭಾಗದ ಜಂಟಿ ಆಯುಕ್ತರ ಆದೇಶದ ಮೇರೆಗ ಶಿವಾಜಿನಗರದ ರಸೆಲ್ ಮಾರುಕಟ್ಟೆಯನ್ನು ಇಂದಿನಿಂದ ಕೊರೊನಾ ಲಾಕ್ಡೌನ್ ಮುಗಿಯುವವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ.

ಆಯುಕ್ತರ ಆದೇಶದ ಹಿನ್ನೆಲೆ ರಸೆಲ್ ಮಾರುಕಟ್ಟೆಯ ಮಾಂಸದ ಅಂಗಡಿಗಳು, ಹಾಗೂ ರಸ್ತೆಯಲ್ಲಿರುತ್ತಿದ್ದ ತರಕಾರಿ ತಳ್ಳುಗಾಡಿಗಳಿಗೂ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಮಾರುಕಟ್ಟೆ ಸಂಪೂರ್ಣ ಖಾಲಿ,ಖಾಲಿಯಾಗಿದೆ. ಇಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗುಂಪಾಗಿ ಸೇರುತ್ತಿದ್ದರು.
ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್ಸ್ ಎಷ್ಟೇ ನಿಯಮಗಳನ್ನು ಮಾಡಿದ್ರೂ ಜನ ಕ್ಯಾರೇ ಎನ್ನುತ್ತಿರಲಿಲ್ಲ. ಕೋವಿಡ್-19 ವೈರಸ್ ಹೆಚ್ಚು ಹರಡುವ ಭೀತಿಯಲ್ಲಿ ಮಾರುಕಟ್ಟೆ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆಯಿಂದಲೇ ರಸೆಲ್ ಮಾರುಕಟ್ಟೆ ಕಂಪ್ಲೀಟ್ ಬಂದ್ ಮಾಡಲಾಗಿದೆ.