ಬೆಂಗಳೂರು :ನಗರದ ಕಮರ್ಷಿಯಲ್ ಸ್ಟ್ರೀಟ್ನ ಮತ್ತೊಬ್ಬ ನಟೋರಿಯಸ್ ರೌಡಿಶೀಟರ್ ಅನ್ನು ಸಿಟಿ ವ್ಯಾಪ್ತಿಯಿಂದ ಗ್ರಾಮಾಂತರ ಪ್ರದೇಶಕ್ಕೆ ಗಡಿಪಾರು ಮಾಡಿ ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ರೌಡಿಗಳ ಚಲನವಲನ ಗಮನಿಸಿ ಗಡಿಪಾರು ಸೂತ್ರವನ್ನು ಪೊಲೀಸ್ ಇಲಾಖೆ ಅಸ್ತ್ರವಾಗಿ ಬಳಸುತ್ತಿದೆ. ನಗರದ ಪೂರ್ವ ವಿಭಾಗದಲ್ಲಿ ಈಗಾಗಲೇ ನಾಲ್ಕಕ್ಕೂ ಹೆಚ್ಚು ರೌಡಿಶೀಟರ್ಗಳನ್ನು ಕಮಿಷನರ್ ಏರಿಯಾದಿಂದ ಹೊರಗಟ್ಟಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.