ಕರ್ನಾಟಕ

karnataka

ETV Bharat / state

ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರದ ಅತೃಪ್ತರ ಮನವೊಲಿಕೆ ಯತ್ನ - ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರ ಅತೃಪ್ತರ ಸಭೆ

ಶಿವಾಜಿನಗರ ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸಿದ್ದರೂ ಸೂಕ್ತ ಬೆಂಬಲ ಸಿಗದ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದು, ರಿಜ್ವಾನ್ ಪರ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರ ಅತೃಪ್ತ ನಾಯಕರ ಸಭೆ

By

Published : Nov 18, 2019, 7:22 PM IST

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸಿದ್ದರೂ ಸೂಕ್ತ ಬೆಂಬಲ ಸಿಗದೆ ಕಂಗಾಲಾಗಿದ್ದಾರೆ. ರೋಷನ್ ಬೇಗ್ ಆಪ್ತರ ಜೊತೆ ರಾಮಲಿಂಗಾರೆಡ್ಡಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದು, ರಿಜ್ವಾನ್ ಪರ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರ ಅತೃಪ್ತರ ಸಂಧಾನಕ್ಕೆ ಯತ್ನ

ರೋಷನ್ ಬೇಗ್ ಜೊತೆ ಗುರುತಿಸಿಕೊಂಡಿದ್ದ ಬಿಬಿಎಂಪಿ ಸದಸ್ಯರ ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್​ ನಾಯಕರು ನಡೆಸಿದರು. ಸಭೆಗೆ ಶಿವಾಜಿನಗರ ವ್ಯಾಪ್ತಿಯ ಎಲ್ಲಾ ಬಿಬಿಎಂಪಿ ಸದಸ್ಯರು ಆಗಮಿಸದ ಹಿನ್ನೆಲೆ ರಾಮಲಿಂಗಾರೆಡ್ಡಿ ಹಾಗೂ ರಿಜ್ವಾನ್ ಅರ್ಷದ್ ಅವರನ್ನು ಕರೆತರಲು ತೆರಳಿದರು. ಪಾಲಿಕೆ ಸದಸ್ಯರನ್ನು ಕರೆತರಲು ಮುಖಂಡರು ತೆರಳುವ ಮುನ್ನ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ರಾಮಲಿಂಗಾರೆಡ್ಡಿ, ಶಿವಾಜಿನಗರ ಅಭ್ಯರ್ಥಿ ರಿಜ್ವಾನ್ ಹಾಗೂ ಶಿವಾಜಿನಗರ ಉಸ್ತುವಾರಿ ಯು.ಟಿ.ಖಾದರ್ ಭಾಗಿಯಾಗಿದ್ದರು. ಆದರೆ ಸಭೆಯಲ್ಲಿ ಇರಬೇಕಾಗಿದ್ದ ಶಿವಾಜಿನಗರ ವ್ಯಾಪ್ತಿಯ ಬಿಬಿಎಂಪಿ ಸದಸ್ಯರು ಕಡಿಮೆ ಇದ್ದ ಹಿನ್ನೆಲೆ ಅವರನ್ನು ಕರೆತರಲು ಖುದ್ದು ನಾಯಕರೇ ತೆರಳಬೇಕಾದ ಸ್ಥಿತಿ ಎದುರಾಯಿತು.

ಪಾಲಿಕೆ ಸದಸ್ಯರು ಕೆಪಿಸಿಸಿಗೆ ಆಗಮಿಸಲು ಒಪ್ಪದಿದ್ದರೆ ಅವರು ಇರುವ ತಾಣದಲ್ಲಿ ಸಭೆ ಮುಂದುವರೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಒಟ್ಟಿನಲ್ಲಿ ಶಿವಾಜಿನಗರ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಪಾಲಿಗೆ ಒಂದು ರೀತಿಯಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದು, ಪಾಲಿಕೆ ಸದಸ್ಯರು ಕೈ ಹಿಡಿಯದಿದ್ದಲ್ಲಿ ಚುನಾವಣೆಯಲ್ಲಿ ಸಾಕಷ್ಟು ಮತಗಳ ಕೊರತೆಯನ್ನು ರಿಜ್ವಾನ್ ಎದುರಿಸಬೇಕಾಗಿ ಬರಲಿದೆ. ಈ ಹಿನ್ನೆಲೆಯಲ್ಲಿ ಶತಾಯಗತಾಯ ಪಾಲಿಕೆ ಸದಸ್ಯರ ಮನವೊಲಿಸುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.

ABOUT THE AUTHOR

...view details