ಕರ್ನಾಟಕ

karnataka

ETV Bharat / state

ಶಿವಾಜಿನಗರ ಉಪ ಚುನಾವಣೆ: 26 ನಾಮಪತ್ರಗಳು ಸಿಂಧು, 5 ನಾಮಪತ್ರ ತಿರಸ್ಕೃತ

ಶಿವಾಜಿನಗರ ಉಪಚುನಾವಣೆಯಲ್ಲಿ ಒಟ್ಟು 26 ನಾಮಪತ್ರಗಳು ಸಿಂಧುವಾಗಿದ್ದು, ಐವರ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿವಾಜಿನಗರ ಉಪ ಚುನಾವಣೆಯಲ್ಲಿ 5 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

By

Published : Nov 19, 2019, 10:03 PM IST

ಬೆಂಗಳೂರು: ಶಿವಾಜಿನಗರ ಉಪಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯವಾಗಿದ್ದು, 26 ನಾಮಪತ್ರಗಳು ಸಿಂಧುವಾಗಿದ್ದು, 5 ನಾಮಪತ್ರಗಳು ತಿರಸ್ಕೃತವಾಗಿವೆ.

ಶಿವಾಜಿನಗರ ಉಪ ಚುನಾವಣೆ: ಐವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಶಿವಾಜಿನಗರ ಉಪ ಕದನಕ್ಕೆ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಕೆಲವರು ಎರಡೆರಡು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಿಂಧು ಆದ ಕಾರಣ ಎರಡು ನಾಮಪತ್ರ ಸಲ್ಲಿಸಿದ್ದವರು ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 26 ಅಭ್ಯರ್ಥಿಗಳು ಶಿವಾಜಿನಗರ ಉಪಚುನಾವಣೆಗೆ ಸ್ಫರ್ಧಿಸಿರೋದಾಗಿ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ‌

ಸ್ವತಂತ್ರವಾಗಿ ಸ್ಪರ್ಧಿಸಿದ್ದ ಐವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ. ದಾಖಲಾತಿಗಳು ಸರಿಯಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ನಾಮಪತ್ರ ತಿರಸ್ಕರಿಸಿದ್ದಾರೆ.

ಚುನಾವಣಾಧಿಕಾರಿ ನಟೇಶ್ ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದ್ದು, ಈಗ ಅಂತಿಮವಾಗಿ 26 ಆಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ. ಇನ್ನು ನಾಮಪತ್ರ ಪರಿಶೀಲನೆ ವೇಳೆ ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್, ಪಕ್ಷೇತರ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ABOUT THE AUTHOR

...view details