ಬೆಂಗಳೂರು: ಶಿವಾಜಿನಗರದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆ, ಬಿಜೆಪಿ ಪಕ್ಷದ ಚುನಾವಣಾ ಕಚೇರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಉದ್ಘಾಟಿಸಿದರು.
ಶರವಣಗೆ ಲೋಕಲ್ ಐಡೆಂಟಿಟಿ ಇದೆ, ಅದೇ ಅವರಿಗೆ ವರವಾಗಲಿದೆ: ಸಚಿವ ಸಿ.ಟಿ ರವಿ
ಶಿವಾಜಿನಗರದಲ್ಲಿ ನೂತನ ಬಿಜೆಪಿ ಪಕ್ಷದ ಚುನಾವಣಾ ಕಚೇರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಉದ್ಘಾಟಿಸಿದರು.
ಜನರ ನಡುವೆ ಇರುವ ಒಬ್ಬ ಜನನಾಯಕ ಬಿಜೆಪಿ ಪಕ್ಷಕ್ಕೆ ಶಿವಾಜಿನಗರದಲ್ಲಿ ಸಿಕ್ಕಿದ್ದಾರೆ, ನಮ್ಮ ಅಭ್ಯರ್ಥಿ ಶರವಣ ಅವರಿಗೆ ಒಂದು ಲೋಕಲ್ ಐಡೆಂಟಿಟಿ ಇದೆ, ಅವರು ಬೇರೆ ಪಕ್ಷದ ಅಭ್ಯರ್ಥಿಯ ರೀತಿ ವಲಸೆ ಬಂದಿರುವವರಲ್ಲ. ಯಾವುದೇ ಅಪೇಕ್ಷೆ ಇಲ್ಲದೆ ಕಳೆದ ಪಾಲಿಕೆ ಚುನಾವಣೆಯಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಅವರ ಧರ್ಮಪತ್ನಿ ಬಿಜೆಪಿಯ ಪಾಲಿಕೆ ಸದಸ್ಯೆ ಯಾಗಿದ್ದು, ದಾಖಲೆಗಳ ಮತಗಳಿಂದ ಶಿವಾಜಿನಗರದ ಜನರು ಶರವಣ ಅವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವತ್ ನಾರಾಯಣ್ ಅವರು ಆಗಮಿಸಬೇಕಿತ್ತು, ಆದರೆ ಗಂಟೆಗಟ್ಟಲೆ ಕಾದರೂ ಅವರು ಬರುವ ಸೂಚನೆ ಸಿಗದ ಕಾರಣ, ಕಾರ್ಯಕರ್ತರು ಬೇಸರದಿಂದಲೇ ನೂತನ ಕಛೇರಿ ಉದ್ಘಾಟನೆ ಮಾಡಿದರು.