ಕರ್ನಾಟಕ

karnataka

ETV Bharat / state

ಅಂಧರು - ಮಂಗಳಮುಖಿಯರ ಬಾಳಲ್ಲಿ ಆಶಾಕಿರಣವಾದ 'ಶಿಶುಮಂದಿರ' ಸಂಸ್ಥೆ - ಅಂಧರಿಗೆ ಹಾಗೂ ಮಂಗಳ ಮುಖಿಯರಿಗೆ ಶಿಶುಮಂದಿರ

ಇಂದು ಸರ್ಕಾರ ಸವಲತ್ತುಗಳನ್ನು ಪಡೆಯಲು ಆಗದೇ ಸಮಾಜದಿಂದ ದೂರ ಉಳಿದ ನೂರಾರು ಅಂಧ ಮತ್ತು ಮಂಗಳ ಮುಖಿಯರನ್ನು ಗುರುತಿಸಿ, 500 ಮಂದಿಗೆ, 10 ಕೆಜಿ ಅಕ್ಕಿ, 5 ಕೆಜಿ ಗೋದಿ ಹಿಟ್ಟು, 2 ಕೆಜಿ ಬೇಳೆ, 1 ಲೀಟರ್ ಎಣ್ಣೆ ತುಂಬಿದ 18 ಕೆಜಿಯ ಕಿಟ್ ವಿತರಣೆ ಮಡುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

shishumandhiraagency-food-kit-delivery-news
ಅಂಧ ಹಾಗೂ ಮಂಗಳಮುಖಿಯರ ಬಾಳಲ್ಲಿ ಆಶಾಕಿರಣವಾದ 'ಶಿಶುಮಂದಿರ' ಸಂಸ್ಥೆ..

By

Published : Nov 17, 2020, 7:18 PM IST

ಕೆಆರ್​​ಪುರ:ಕೊರೊನಾ ಎಫೆಕ್ಟ್ ನಿಂದ ಇನ್ನೂ ಚೇತರಿಸಿಕೊಳ್ಳದ ಅಂಧರಿಗೆ ಹಾಗೂ ಮಂಗಳ ಮುಖಿಯರಿಗೆ ಶಿಶುಮಂದಿರ ವತಿಯಿಂದ ರೇಷನ್ ಕಿಟ್ ವಿತರಣೆ ಮಾಡಲಾಯಿತು.

ಅಂಧ ಹಾಗೂ ಮಂಗಳಮುಖಿಯರ ಬಾಳಲ್ಲಿ ಆಶಾಕಿರಣವಾದ 'ಶಿಶುಮಂದಿರ' ಸಂಸ್ಥೆ

ಕೆಆರ್​​ಪುರದ ಭಟ್ಟರಹಳ್ಳಿ ಸಮೀಪದ 'ಶಿಶು ಮಂದಿರ' ಸಂಸ್ಥೆ ಕೊರೊನಾ‌ ಸಮಸ್ಯೆಯಿಂದ ಸಮಾಜದಲ್ಲಿ ಊಟಕ್ಕೆ ತುಂಬಾ ಸಮಸ್ಯೆ ಎಂದುರಿಸುತ್ತಿರುವ ಸುಮಾರು 500 ಕ್ಕೂ ಹೆಚ್ಚು ಜನರನ್ನು ಗುರುತಿಸಿ ಅದರಲ್ಲೂ ಮಂಗಳ ಮುಖಿಯರಿಗೆ ಹಾಗೂ ಅಂಧರಿಗೆ ರೇಷನ್ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಡಜನರಿಗೆ ಸೇವೆ ಸಲ್ಲಿಸುತ್ತ ಹಾಗೂ ಸಾವಿರಾರು ಬಡ ಮಕ್ಕಳಿಗೆ ಆಶ್ರಯ ನೀಡುತ್ತಾ ಬಂದಿರುವ ಈ 'ಶಿಶು ಮಂದಿರ' ಸಂಸ್ಥೆ, ಕೊರೊನಾದಿಂದ ಲಾಕ್ ಡೌನ್‌ ಆದ ಸಮಯದಿಂದ ಇಂದಿನವರೆಗೆ ಇಪ್ಪತೈದು ಸಾವಿರಕ್ಕೂ ಹೆಚ್ಚು ಬಡ ಜನರಿಗೆ ಮೂಲ ಸೌಕರ್ಯಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ನೀಡಿ ಬಡವರ ಪಾಲಿನ ಆಶಾಕಿರಣವಾಗಿದೆ.

ಮಂಗಳಮುಖಿಯರಾದ ಶ್ರೀ ಅವರು ಮಾತನಾಡಿ, ಸಮಾಜದಲ್ಲಿ ಹಲವು ಕಷ್ಟಗಳನ್ನು ಎದುರಿಸಿಕೊಂಡು ಬಂದಿರುವ ನಮಗೆ ಶಿಶುಮಂದಿರದ ವತಿಯಿಂದ ರೇಷನ್ ಕಿಟ್ ವಿತರಿಸುವ ಮೂಲಕ ಕೈ ಹಿಡಿದು ಕಾಪಾಡುತ್ತಿದ್ದಾರೆ ಎಂದು ಹೇಳಿದರು.

ಇದಲ್ಲದೇ ಶಿಶು ಮಂದಿರದಲ್ಲಿ ಭರತನಾಟ್ಯ, ಕಂಪ್ಯೂಟರ್ ಕಲಿಕೆ, ಡ್ರೈವಿಂಗ್ ಸೇರಿದಂತೆ ಹಲವು ಜೀವನೋಪಾಯಕ್ಕಾಗಿ ಕೆಲಸದ ತರಬೇತಿ ನೀಡುತ್ತಿದ್ದು, ಸರ್ಕಾರದಿಂದಲೇ ಸಹಾಯ ಇಲ್ಲದಿದ್ದಾಗ ಶಿಶು ಮಂದಿರ ನಮ್ಮ ಕೈ ಹಿಡಿದಿರುವುದು ಮೆಚ್ಚುವ ವಿಷಯ ಇದೀ ರೀತಿಯ ಮನಸ್ಸುಗಳು ಎಲ್ಲರಿಗೂ ಬರಲಿ ಎಂದು ಹೇಳಿದರು.

ABOUT THE AUTHOR

...view details