ಕರ್ನಾಟಕ

karnataka

ETV Bharat / state

ಫೆ. 23ರಂದು ಶೆಫರ್ಡ್ ಇಂಡಿಯಾ ಇಂಟರ್​​​​ ನ್ಯಾಷನಲ್ ರಾಜ್ಯ ಪದಾಧಿಕಾರಿಗಳ ಆಯ್ಕೆ - Former Minister H.Vishwanath

ಫೆ. 23ರಂದು ಶೆಫರ್ಡ್ ಇಂಡಿಯಾ ಇಂಟರ್​ ನ್ಯಾಷನಲ್ ಕರ್ನಾಟಕ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್ ತಿಳಿಸಿದರು.

Shepherd International's state Executives Selection on 23rf Feb
ಫೆ. 23 ರಂದು ಶೆಫರ್ಡ್ ಇಂಟರ್​ ನ್ಯಾಷನಲ್ ರಾಜ್ಯ ಪದಾಧಿಕಾರಿಗಳ ಆಯ್ಕೆ

By

Published : Feb 20, 2020, 9:02 PM IST

ಬೆಂಗಳೂರು: ಫೆ. 23ರಂದು ಶೆಫರ್ಡ್ ಇಂಡಿಯಾ ಇಂಟರ್​ ನ್ಯಾಷನಲ್ ಕರ್ನಾಟಕ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೆಫರ್ಡ್ ಇಂಡಿಯಾ ಇಂಟರ್​ ನ್ಯಾಷನಲ್ ಕುರುಬ ಸಮುದಾಯದ ಜೊತೆಗೆ ಎಲ್ಲಾ ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಕಾಲ ಕಾಲಕ್ಕೆ ಚರ್ಚಿಸಿ ಹಿಂದುಳಿದ ವರ್ಗಗಳ ಹಾಗೂ ಶೋಷಿತ ವರ್ಗಗಳ ಸಂಘಟನೆ ಹಾಗೂ ಹೋರಾಟದ ನೇತೃತ್ವವನ್ನು ವಹಿಸಿದೆ. ದೇಶ-ವಿದೇಶಗಳಲ್ಲಿ ಕುರುಬ ಸಮುದಾಯ ವಿವಿಧ ಹೆಸರುಗಳಲ್ಲಿ ಗುರುತಿಸಿಕೊಂಡು ಅಸ್ತಿತ್ವ ಹೊಂದಿದೆ. 12 ಕೋಟಿಯಷ್ಟು ಜನಸಂಖ್ಯೆಯನ್ನು ಭಾರತದಲ್ಲಿ ಹೊಂದಿದ್ದೇವೆ. ಕುರುಬ ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಯಿಂದಲೇ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ದಶಕದ ಹಿಂದೆ ದೆಹಲಿಯಲ್ಲಿ ಇದರ ಉದ್ಘಾಟನೆಯಾಗಿದ್ದು, ರಾಷ್ಟ್ರದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದೀಗ ರಾಜ್ಯದಲ್ಲಿಯೂ ಸಮುದಾಯವನ್ನು ಇನ್ನಷ್ಟು ಬಲಗೊಳಿಸುವ ಕಾರ್ಯ ಸಂಘಟನೆಯಡಿ ನಡೆಯಲಿದೆ ಎಂದರು.

ಮಾಜಿ ಸಚಿವರಾದ ಹೆಚ್​.ವಿಶ್ವನಾಥ್, ಹೆಚ್.ಎಂ.ರೇವಣ್ಣ ಜಂಟಿ ಸುದ್ದಿಗೋಷ್ಠಿ

ಪ್ರತಿ ವರ್ಷ ಗಾಂಧಿ ಜಯಂತಿ ದಿನ ಶೆಫರ್ಡ್ ಇಂಡಿಯಾ ಇಂಟರ್​ ನ್ಯಾಷನಲ್ ಸ್ಥಾಪನಾ ದಿನವನ್ನು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಈ ಸಾರಿಯೂ ನಾವು ಆಚರಣೆ ಮಾಡಲಿದ್ದೇವೆ. ಸಂಘಟನೆಯ ಮೊದಲ ಸಭೆ ಫೆ. 23ಕ್ಕೆ ನಡೆಯಲಿದೆ. ಮಾ. 2ರಂದು ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ಇದೆ. ಇದಾದ ಬಳಿಕ ರಾಷ್ಟ್ರದ ವಿವಿಧ ಭಾಗಗಳಲ್ಲಿ ಸಭೆಗಳನ್ನು ನಡೆಸಿ ಮುಂಬರುವ ಜೂನ್ ತಿಂಗಳಲ್ಲಿ ರಾಷ್ಟ್ರಮಟ್ಟದ ಸಮ್ಮೇಳನವನ್ನು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಇದಲ್ಲದೆ ಮುಂಬರುವ ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ನಲ್ಲಿ ಸಮ್ಮೇಳನ ನಡೆಸಲಿದ್ದೇವೆ. ಈಗಾಗಲೇ ಅಲ್ಲಿಯ ಸ್ನೇಹಿತರ ಜೊತೆ ಸಮಾಲೋಚನೆ ನಡೆಸಿದ್ದು, ಈ ಕಾರ್ಯಕ್ರಮದ ಅಂತಿಮ ರೂಪುರೇಷೆ ನಡೆಯುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ,​ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ ಆಗುತ್ತಿರಬಹುದು. ಅವರು ಬೈದಾಡೋದು ಬರೀ ರಾಜಕೀಯಕ್ಕಷ್ಟೇ ಸೀಮಿತ. ಅವರು ಬೇರೆ ಬೇರೆ ಪಕ್ಷದವರಾಗಿದ್ರು ಇಬ್ಬರು ಒಂದೇ ಸಮುದಾಯದವರು. ಎಷ್ಟೇ ವಾಕ್ಸಮರ ನಡೆಸಿಕೊಂಡ್ರು ಸಮುದಾಯದಲ್ಲಿ ಮಾತ್ರ ಒಟ್ಟಾಗಿದ್ದಾರೆ. ಬೇರೆ ಸಮುದಾಯಗಳ ರೀತಿ ಪುಣ್ಯಕ್ಕೆ ನಮ್ಮ ಸಮುದಾಯ ಇಬ್ಭಾಗ ಆಗಿಲ್ಲ. ರಾಜ್ಯದಲ್ಲಿ ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲಾ ಸಮುದಾಯಗಳೂ ಇಬ್ಭಾಗ ಆಗಿವೆ. ನಾವು ಒಗ್ಗಟ್ಟಾಗಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.

ABOUT THE AUTHOR

...view details