ಕರ್ನಾಟಕ

karnataka

ETV Bharat / state

ಶಿಕ್ಷೆಯ ಅವಧಿಗಿಂತ ತಡವಾಗಿ ಬಿಡುಗಡೆಯಾಗಲಿದ್ದಾರೆ ಶಶಿಕಲಾ .. ಕಾರಣವೇನು ಗೊತ್ತಾ? - shashikala-will-be-released-late-than-her-duration

ಸರ್ಕಾರದ ಎಲ್ಲಾ ರಜೆಯಂತೆ ಜೈಲಿನ ಕೈದಿಗಳಿಗೂ ಸಹ ರಜೆ ಇರುತ್ತೆ. ಆದರೆ ಶಶಿಕಲಾ ನಟರಾಜನ್ ವಿಚಾರದಲ್ಲಿ ಅದನ್ನು ಪರಿಗಣಿಸಿಲ್ಲ. ಕಾರಣ ಪರಪ್ಪನ ಅಗ್ರಹಾರದಲ್ಲಿದ್ದ ಶಶಿಕಲಾಗೆ ಯಾವುದೇ ರಜೆ ಇಲ್ಲ. ಭ್ರಷ್ಟಚಾರ, ಜೀವಾವಧಿ ಶಿಕ್ಷೆ ಸೇರಿ ಕೆಲ ಅಪರಾಧಗಳಿಗೆ ರಜೆ ಅನ್ವಯವಾಗುವುದಿಲ್ಲ. ಈ ಪ್ರಕರಣದಲ್ಲಿ ಶಶಿಕಲಾಗೆ ಪೆರೋಲ್ ಇಲ್ಲದ ಕಾರಣ ಶಿಕ್ಷೆಯ ದಿನಾಂಕಕ್ಕಿಂತ 17 ದಿನ ತಡವಾಗಿ ರಿಲೀಸ್ ಆಗಲಿದ್ದಾರೆ.

shashikala
ಶಶಿಕಲಾ

By

Published : Nov 4, 2020, 4:52 PM IST

ಬೆಂಗಳೂರು:ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ವಿಚಾರ ಸಂಬಂಧ ಭಾರಿ ಚರ್ಚೆಗಳು ಕೇಳಿ ಬರುತ್ತಿವೆ. ಆದರೆ ಶಶಿಕಲಾ ನಿಗದಿತ ದಿನಾಂಕಕ್ಕಿಂತ 17 ದಿನ ತಡವಾಗಿ ಬಿಡುಗಡೆಯಾಗುತ್ತಿದ್ದಾರೆ. ಏಕೆಂದರೆ ಜೈಲಿನ ಕೆಲವೊಂದು ಕಟ್ಟು ನಿಟ್ಟಿನ ನಿಯಮಗಳು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ 1997ರಲ್ಲಿ ಅಕ್ರಮ ಹಣ ಸಂಪಾದನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಎರಡು ಬಾರಿ ಬಂಧನಕ್ಕೊಳಗಾಗಿದ್ದರು. ಮೊದಲು ಜನವರಿ 31, 1997 ರಲ್ಲಿ ಹಾಗೂ ಎರಡನೇ ಬಾರಿ 2014ರಲ್ಲಿ ಮತ್ತೊಮ್ಮೆ ಬಂಧನಕ್ಕೊಳಗಾಗಿ ಪ್ರಕರಣ ಟ್ರಯಲ್ ನಡೆದು ನ್ಯಾಯಾಲಯ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ರೂ. ದಂಡ ವಿಧಿಸಿತ್ತು. ಹೀಗಾಗಿ 15ನೇ ತಾರೀಖು ಫೆಬ್ರವರಿ 2017 ಶಶಿಕಲಾ ನಟರಾಜನ್ ಜೈಲು ಸೇರಿದ್ದರು.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಆರ್​ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ

ಜೈಲಿನಲ್ಲಿರುವ ಹೆಚ್ಚು 17 ದಿನ ಯಾವುದು.?

4 ವರ್ಷ ಶಿಕ್ಷೆ ಪ್ರಕಾರ 14 ಫೆಬ್ರವರಿ 2021ರ ತನಕ ಜೈಲಿನಲ್ಲಿರಬೇಕಿತ್ತು. ಆದರೆ ಈ ನಡುವೆ ಅವರು 17 ದಿನಗಳ ಕಾಲ ಪೆರೋಲ್ ಪಡೆದಿದ್ದರು. 4 ವರ್ಷ ಶಿಕ್ಷೆ ಮುಗಿಯುವುದಕ್ಕೆ ಪೆರೋಲ್ 17 ದಿನ ಸೇರಿಸಲಾಗುತ್ತದೆ. ಹೀಗಾಗಿ 2021ರ ಮಾರ್ಚ್ 3ರಂದು ಬಿಡುಗಡೆ ದಿನಾಂಕ ನಿಗದಿಯಾಗಬೇಕಿದೆೆ. ಇನ್ನೂ ಇದರಲ್ಲಿ ಏಕಕಾಲೀನ ದಿನಗಳ ಶಿಕ್ಷೆ ಕಡಿತಗೊಳಿಸಲಾಗುತ್ತದೆ. ಸದ್ಯ 35 ದಿನಗಳ ಏಕಕಾಲೀನ ಶಿಕ್ಷೆ ಕಡಿತಗೊಳಿಸಿದರೆ ಮುಂದಿನ ವರ್ಷ ಜನವರಿ 28ರಂದು ಶಶಿಕಲಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಡವಾಗಿ ಬಿಡುಗಡೆಯಾಗುವ ಕುರಿತ ವಿವರಣೆ
ಶಶಿಕಲಾ ತಡವಾಗಿ ಬಿಡುಗಡೆಯಾಗುವ ಕುರಿತ ವಿವರಣೆ

ಶಶಿಕಲಾ ನಟರಾಜನ್ ಪೆರೋಲ್ ದಿನಗಳು:

06/10/2017 ರಿಂದ 12/10/2017 ರವರೆಗೆ 5 ದಿನ ಪೆರೋಲ್​ನಲ್ಲಿದ್ದರು. 20/03/2018 ರಿಂದ 31/03/2018 ವರೆಗೆ 12 ದಿನ ಪೆರೋಲ್​ನಲ್ಲಿದ್ದರು. ಒಟ್ಟು ಈ ಪ್ರಕರಣದಲ್ಲಿ ಪತಿ ನಟರಾಜನ್ ಅನಾರೋಗ್ಯ ಸಂಬಂಧ 17 ದಿನಗಳು, ಬಳಿಕ ಆತ ಸಾವನ್ನಪಿದ್ದಾಗ 12 ದಿನ ಪೆರೋಲ್ ಹೋಗಿದ್ದಾರೆ.

ಶಶಿಕಲಾ ತಡವಾಗಿ ಬಿಡುಗಡೆಯಾಗುವ ಕುರಿತ ವಿವರಣೆ
ಶಶಿಕಲಾ ತಡವಾಗಿ ಬಿಡುಗಡೆಯಾಗುವ ಕುರಿತ ವಿವರಣೆ

ಶಶಿಕಲಾಗೆ ಪೆರೋಲ್ ದಿನಗಳನ್ನು ರಜೆಯಾಗಿ ಏಕೆ ಪರಿಗಣಿಸಿಲ್ಲ.?

ಸಾಮಾನ್ಯವಾಗಿ ಪೆರೋಲ್ ದಿನಗಳನ್ನು ರಜೆ ಎಂದು ತಿರ್ಮಾನಿಸಲಾಗುತ್ತೆ. ಸರ್ಕಾರದ ಎಲ್ಲಾ ರಜೆಯಂತೆ ಜೈಲಿನ ಕೈದಿಗಳಿಗೂ ಸಹ ರಜೆ ಇರುತ್ತೆ. ಆದರೆ ಶಶಿಕಲಾ ನಟರಾಜನ್ ವಿಚಾರದಲ್ಲಿ ಅದನ್ನು ಪರಿಗಣಿಸಿಲ್ಲ. ಕಾರಣ ಪರಪ್ಪನ ಅಗ್ರಹಾರದಲ್ಲಿದ್ದ ಶಶಿಕಲಾಗೆ ಯಾವುದೇ ರಜೆ ಇಲ್ಲ. ಭ್ರಷ್ಟಚಾರ, ಜೀವಾವದಿ ಶಿಕ್ಷೆ ಸೇರಿ ಕೆಲ ಅಪರಾಧಗಳಿಗೆ ರಜೆ ಅನ್ವಯವಾಗುವುದಿಲ್ಲ. ಈ ಪ್ರಕರಣದಲ್ಲಿ ಶಶಿಕಲಾಗೆ ಪೆರೋಲ್ ಇಲ್ಲದ ಕಾರಣ ಶಿಕ್ಷೆಯ ದಿನಾಂಕಕ್ಕಿಂತ 17 ದಿನ ತಡವಾಗಿ ರಿಲೀಸ್ ಆಗಲಿದ್ದಾರೆ.

ಈ ಬಗ್ಗೆ ಆರ್​ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಮಾತನಾಡಿ, ಶಶಿಕಲಾ ನಟರಾಜನ್ ನಾಳೆ ಬರ್ತಾರೆ, ನಾಡಿದ್ದು ಬರ್ತಾರೆ ಎನ್ನುವ ವಿಚಾರಗಳು ಹರಿದಾಡ್ತಿದೆ. ಆದರೆ ಆರ್​ಟಿಐ ಹಾಕಿ ನೋಡಿದಾಗ ಪೆರೋಲ್ ಅವಧಿ ಇರುವ ಕಾರಣ ಸದ್ಯ ಶಶಿಕಲಾಗೆ ಬಿಡುಗಡೆ ಭಾಗ್ಯವಿಲ್ಲ ಎಂದರು. ಹೀಗಾಗಿ ಶಶಿಕಲಾ ನಟರಾಜನ್ 2021ರವರೆಗೆ ಜೈಲಿನಲ್ಲಿ ‌ಇರಬೇಕು ಎಂದು ತಿಳಿಸಿದರು.

ABOUT THE AUTHOR

...view details