ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಯಾವ ಸಮಯದಲ್ಲಿ ಬೇಕಾದರೂ ಬಿಡುಗಡೆಯಾಗುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಶಶಿಕಲಾ ನಟರಾಜನ್ ನಾಲ್ಕು ವರ್ಷದ ಜೈಲು ಶಿಕ್ಷೆ 2021 ಫೆಬ್ರವರಿ 15ಕ್ಕೆ ಮುಕ್ತಾಯಗೊಳ್ಳಲಿದೆ. ಈಗಿದ್ದರೂ ಅದಕ್ಕೂ ಮುನ್ನ ಬಿಡುಗಡೆಯಾಗಲಿದ್ದಾರ ಎಂಬ ಪ್ರಶ್ನೆ ಸದ್ಯ ಸದ್ದು ಮಾಡಿದೆ. ಸನ್ನಡತೆ ಹಾಗೂ 135 ರಜೆ ದಿನಗಳ ಕಳೆದು ಬಿಡುಗಡೆ ಮಾಡುವಂತೆ ಮನವಿ ಪತ್ರವನ್ನ ಶಶಿಕಲಾ ಜೈಲಾಧಿಕಾರಿಗಳಿಗೆ ಬರೆದಿದ್ದಾರೆ.
ಹೀಗಾಗಿ ಸರ್ಕಾರದ ನಿರ್ಧಾರದ ಮೇಲೆ ಶಶಿಕಲಾ ಬಿಡುಗಡೆ ಭಾಗ್ಯ ನಿಂತಿದೆ. ಸದ್ಯ ಶಶಿಕಲಾ ವಿಚಾರವಾಗಿ ಯಾವುದೇ ತಾಂತ್ರಿಕ ದೋಷ ಇಲ್ಲದ ಕಾರಣ, ಮಾಹಿತಿಯನ್ನು ಕಾನೂನು ಸಲಹೆಗಾರರಿಗೆ ಕಳುಹಿಸಲಾಗಿದೆ. ಬಳಿಕ ಬರುವ ಮಾಹಿತಿಗಳ ಆಧರಿಸಿ ಸರ್ಕಾರದ ಮುಂದಿನ ತೀರ್ಮಾನ ಗೊತ್ತಾಗಲಿದೆ. ಇನ್ನು ನಾಲ್ಕು ವರ್ಷದ ಜೈಲು ವಾಸದಲ್ಲಿ ತರಕಾರಿ ಬೆಳೆದಿದ್ದು, ಬೆಳೆದ ತರಕಾರಿಯನ್ನು ಜೈಲಿನಲ್ಲಿ ತಯಾರಾಗುವ ಅಡುಗೆಗೆ ಬಳಕೆ ಮಾಡಲಾಗಿದೆ. ಆದರೆ ಅದಕ್ಕೆ ಕೂಲಿ ಪಡೆಯದ ಶಶಿಕಲಾ, ತನ್ನ ನಾಲ್ಕು ವರ್ಷಗಳ ಜೈಲುವಾಸವನ್ನು ಸಾಧಾರಣವಾಗಿ ಕಳೆದಿದ್ದಾರೆ.
ಹಾಗೆ ಜೈಲಿನಲ್ಲಿ ನಲಿಕಲಿ ಮೂಲಕ ಕನ್ನಡ ಕಲಿತಿದ್ದಾರೆ. ಸಂಪೂರ್ಣವಾಗಿ ಕನ್ನಡ ಅಭ್ಯಾಸ ಮಾಡಿದ್ದು, ಕನ್ನಡ ಓದಲು ಹಾಗೂ ಬರೆಯಲು ಕನ್ನಡ ಕಲಿಕೆಯ ಕೋರ್ಸ್ ಮುಗಿಸಿದ್ದಾರೆ. ಸದ್ಯ ಶಶಿಕಲಾ ಬಿಡುಗಡೆಯಾಗ್ತಾರ ಅಥವಾ ಶಿಕ್ಷೆಯ ಅವಧಿ ಮುಗಿದ ಬಳಿಕ ಬರ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಜೈಲಾಧಿಕಾರಿಗಳು ಯಾವುದೇ ಸ್ಪಷ್ಟ ಉತ್ತರ ನೀಡದೇ ಇದ್ದು, ಜೈಲಿನ ಕೆಲ ಮೂಲಗಳ ಪ್ರಕಾರ ಆದಷ್ಟು ಬೇಗ ಬಿಡುಗಡೆಯಾಗುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ:10 ಕೋಟಿ ರೂ. ದಂಡ ಕಟ್ಟಿ ಜೈಲಿನಿಂದ ಹೊರ ಬರ್ತಾರಾ ಶಶಿಕಲಾ? ಕಟ್ಟಿದರೆ ಜನವರಿಯಲ್ಲೇ ರಿಲೀಸ್