ಕರ್ನಾಟಕ

karnataka

ETV Bharat / state

ನಾಲ್ಕು ವರ್ಷಗಳ ಸಜೆಯಲ್ಲಿದ್ದ ಶಶಿಕಲಾಗೆ ಬಂದಿದ್ದ ಪತ್ರಗಳೆಷ್ಟು ಗೊತ್ತಾ? - ಶಶಿಕಲಾ ಲೇಟೆಸ್ಟ್​ ನ್ಯೂಸ್

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಸಜೆ ಅನುಭವಿಸಿ ನಿನ್ನೆ ಶಶಿಕಲಾ ನಟರಾಜನ್ ಅವರು ಬಿಡುಗಡೆಗೊಂಡಿದ್ದಾರೆ. ಅವರು ಜೈಲಿನಲ್ಲಿದ್ದಾಗ ಬರೋಬ್ಬರಿ ಒಂದೂವರೆ ಸಾವಿರ ಪತ್ರಗಳ ಬಂದಿವೆ ಎಂಬ ವಿಚಾರ ತಿಳಿದು ಬಂದಿದೆ.

ಶಶಿಕಲಾ
Shashikala

By

Published : Jan 28, 2021, 9:26 AM IST

ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಸಜೆ ಅನುಭವಿಸಿ ಶಶಿಕಲಾ ನಟರಾಜನ್ ಬಿಡುಗಡೆಯಾಗಿದ್ದಾರೆ. ಅವರು ಜೈಲಿನಲ್ಲಿದ್ದಾಗ ಒಂದೂವರೆ ಸಾವಿರ ಪತ್ರಗಳ ಬಂದಿವೆ ಎಂಬ ವಿಚಾರ ತಿಳಿದು ಬಂದಿದೆ.

ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಾಲ್ಕು ವರ್ಷಗಳ ಅವಧಿಯಲ್ಲಿ ಅಭಿಮಾನಿಗಳು ಪತ್ರ ಬರೆದು ಕಳುಹಿಸಿದ್ದು, ಶಶಿಕಲಾಗೆ ಬರೆದಿರುವ ಪತ್ರಗಳು ಬಹುತೇಕ ಅಭಿಮಾನಿಗಳಿಂದ ಬಂದಿರುವುದು ಕುತೂಹಲಕಾರಿಯಾಗಿದೆ.

ಓದಿ: ಸಿಂದಗಿ ಶಾಸಕ ಎಂಸಿ ಮನಗೂಳಿ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಹೆಚ್​​ಡಿ ದೇವೇಗೌಡ

ಜೈಲಿನ ಎರಡು ರಿಜಿಸ್ಟರ್ ಬುಕ್​​ನಲ್ಲಿ ಪ್ರತಿ ಪತ್ರಗಳ ಬಗ್ಗೆ ನಮೂದಿಸಲಾಗಿದ್ದು, ಒಂದೂವರೆ ಸಾವಿರ ಪೋಸ್ಟ್ ಮತ್ತು ಭೇಟಿ ನೀಡಿದ ವಿಸಿಟರ್ಸ್​ಗಳ ಬಗ್ಗೆ ಪುಸ್ತಕದಲ್ಲಿ ಎಂಟ್ರಿಯಾಗಿದೆ. ಪತ್ರಗಳ‌ ಜೊತೆಗೆ ಜಾರಿ‌ ನಿರ್ದೇಶಾಲಯ (ಇಡಿ) ನೊಟೀಸ್​​ಗಳು ಬಂದಿವೆ. ಇಡಿಯಿಂದ ಬಂದಿರುವ ನೊಟೀಸ್ ಕೂಡ ಶಶಿಕಲಾಗೆ ನೀಡಿ ಆಕೆಯಿಂದ ಜೈಲು ಅಧಿಕಾರಿಗಳು ಅಕ್ನಾಲೆಜ್ಮೆಂಟ್ ಬರೆಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details