ಬೆಂಗಳೂರು:ಮೊದಲ ನಾನು ಬಾರಿಗೆ ಮತ ಹಾಕುವವರ ಜೊತೆ ಸಂವಾದ ನಡೆಸಿದ್ದೇನೆ. ಇದು ಟ್ಯಾಕ್ಸ್ ಕಟ್ಟುವವರ ಜೊತೆಗಿನ ಸಂವಾದ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕೃಷ್ಣಬೈರೇಗೌಡರ ಪರ ಈ ಹಿಂದೆ ಪ್ರಚಾರ ಮಾಡಿದ್ದೆ. ಈ ಬಾರಿಯೂ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಸಂದೇಶ ಸರಳವಾಗಿದೆ. ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಮ್ಮ ಉದ್ದೇಶ. ರಾಜಕೀಯ ಹೊರತುಪಡಿಸಿ ಚುನಾವಣೆಯಲ್ಲಿ ಅನೇಕ ಸವಾಲುಗಳಿವೆ. ಕಾಂಗ್ರೆಸ್ ಈ ಸವಾಲು ಎದುರಿಸಲು ಸಜ್ಜಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದ್ರೆ ಸಿಎಂ ಸ್ಥಾನ ಬಿಡುತ್ತೇವೆ ಎಂದಿದ್ದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಹಿರಿಯ ನಾಯಕರು. ಎಐಸಿಸಿ ಅಧ್ಯಕ್ಷರು. ಅವರಿಗೆ ಸಂಪೂರ್ಣ ಬೆಂಬಲ ಇದೆ. ಕಾಂಗ್ರೆಸ್‌ನಲ್ಲಿ ಚುನಾವಣೆಗೂ ಮುನ್ನ ಸಿಎಂ ಘೋಷಣೆ ಮಾಡುವ ವಾಡಿಕೆಯಿಲ್ಲ. ಸಿಎಂ ಆಯ್ಕೆಗೆ ತನ್ನದೇ ಪ್ರಕ್ರಿಯೆ ಇದೆ. ಮೊದಲು ಚುನಾವಣೆಯಲ್ಲಿ ಗೆಲ್ಲುವ ಗುರಿ ನಮ್ಮದು. ಎಲೆಕ್ಷನ್ ಬಳಿಕ ಶಾಸಕರ ಅಭಿಪ್ರಾಯ ಪರಿಗಣಿಸಿ ಹೈಕಮಾಂಡ್ ಸಿಎಂ ಯಾರು ಅಂತ ನಿರ್ಧಾರ ಮಾಡುತ್ತದೆ ಎಂದು ತರೂರ್ ತಿಳಿಸಿದರು.