ಕರ್ನಾಟಕ

karnataka

ETV Bharat / state

ಶರ್ಮಿಳಾ ಮಾಂಡ್ರೆ ಕಾರು ಪಿಲ್ಲರ್‌ಗೆ ಡಿಕ್ಕಿ.. ನಟಿ ಸೇರಿ ಇಬ್ಬರಿಗೆ ಗಾಯ.. - ಶರ್ಮಿಳಾ ಮಾಂಡ್ರೆ ಗೆ ಅಪಘಾತ

ನಿನ್ನೆ ರಾತ್ರಿ ಜ್ವಾಗಾರ್ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಸ್ನೇಹಿತರು ಜಾಲಿ ರೈಡ್ ಮಾಡುವಾಗ ವಸಂತನಗರದ ಬಳಿ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ.‌

Sharmila mandre car accident
ಶರ್ಮಿಳಾ ಮಾಂಡ್ರೆ ಕಾರು

By

Published : Apr 4, 2020, 11:11 AM IST

ಬೆಂಗಳೂರು : ಸಾಮಾನ್ಯ ಜನರಿಗೆ ಮಾದರಿಯಾಗಬೇಕಾದ ಸೆಲೆಬ್ರಿಟಿಗಳೇ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ್ದಾರೆ. ಮನೆಯಲ್ಲಿರದೇ ನಿನ್ನೆ ರಾತ್ರಿ ಜಾಲಿ ರೈಡ್ ಹೋಗಿದ್ದ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತಕ್ಕೀಡಾಗಿದೆ. ಶರ್ಮಿಳಾ ಮುಖಕ್ಕೂ ಗಾಯಗಳಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶರ್ಮಿಳಾ ಮಾಂಡ್ರೆ ಕಾರು ಅಪಘಾತ
ನಿನ್ನೆ ರಾತ್ರಿ ಜ್ವಾಗಾರ್ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಸ್ನೇಹಿತರು ಜಾಲಿ ರೈಡ್ ಮಾಡುವಾಗ ವಸಂತನಗರದ ಬಳಿ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ.‌ ಕಾರಿನಲ್ಲಿದ್ದ ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತನಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಅಪಘಾತವಾದಾಗ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು? ಮದ್ಯ ಸೇವನೆ ಮಾಡಿ ಕಾರ್ ಡ್ರೈವಿಂಗ್​​ ಮಾಡಿದ್ದರಾ? ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸದ್ಯ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details