ಕರ್ನಾಟಕ

karnataka

ಬೆಂಗಳೂರಿನ ಗಲಭೆ ದೃಶ್ಯ ಫೇಸ್‌ಬುಕ್ ಲೈವ್​ನಲ್ಲಿ ಶೇರ್?: ಆರೋಪಿಯ ಪತ್ತೆಗೆ ಖಾಕಿ ಜಾಲ

By

Published : Aug 15, 2020, 3:49 PM IST

ಬೆಂಗಳೂರಿನ ಗಲಭೆಯ ನೇರ ದೃಶ್ಯವನ್ನು ಸಾವಿರಾರು ಜನರಿಗೆ ಫೇಸ್ ಬುಕ್ ಲೈವ್ ಮಾಡಿ, ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯ ಪತ್ತೆಗಾಗಿ ಪೊಲೀಸರು‌ ಮುಂದಾಗಿದ್ದಾರೆ.

Share on Bengaluru Riot Scene Facebook Live
ಬೆಂಗಳೂರಿನ ಗಲಭೆ ದೃಶ್ಯ ಫೇಸ್ ಬುಕ್ ಲೈವ್​ನಲ್ಲಿ ಶೇರ್

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿಂತೆ, ಗಲಭೆಯ ನೇರ ದೃಶ್ಯವನ್ನು ಸಾವಿರಾರು ಜನರಿಗೆ ಫೇಸ್ ಬುಕ್ ಲೈವ್ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ಸೊಹೈಲ್ ಖಾನ್ ಎಂಬಾತನ ಪತ್ತೆಗಾಗಿ ಪೊಲೀಸರು‌ ಮುಂದಾಗಿದ್ದಾರೆ.

ಆಗಷ್ಟ್​ 11ರ ರಾತ್ರಿ ನಡೆದ ಡಿ.ಜೆ.ಹಳ್ಳಿ ಠಾಣೆ ಮುಂದೆ ನಡೆದ ಗಲಭೆ ದೃಶ್ಯವನ್ನು, ಫೇಸ್​​ಬುಕ್​​ನಲ್ಲಿ ವಿಡಿಯೋ ಮಾಡಿ ನಮ್ಮ ಧರ್ಮದ ಕೆಲಸ ಎಲ್ಲರೂ ಕೈ ಜೋಡಿಸಿ ಅಂತ ಕರೆ ನೀಡಿದ್ದಾನೆ ಎಂದು ಹೇಳಲಾಗಿದೆ. ಧರ್ಮ ಅವಹೇಳನ ಮಾಡಲಾಗಿದ್ದು, ಪೊಲೀಸರಿಂದ ನ್ಯಾಯ ಅಸಾಧ್ಯ ಹೀಗಾಗಿ ಎಲ್ಲರೂ ಕೈ ಜೋಡಿಸಿ ಎಂದಿದ್ದಾನೆ‌‌ ಎನ್ನಲಾಗಿದೆ.

ಸೊಹೈಲ್​​ಗೆ 60 ಸಾವಿರ ಫಾಲೋವರ್ಸ್​​ಗಳಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ಶೋಧ‌ ನಡೆಸುತ್ತಿದ್ದಾರೆ.

For All Latest Updates

ABOUT THE AUTHOR

...view details