ಬೆಂಗಳೂರು:ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಸಿಎಂ ಹಾಗೂ ನನ್ನ ಮುಂದೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.
ಶರತ್ ಬಚ್ಚೇಗೌಡ ಉಲ್ಟಾ ಹೊಡೀತಿದ್ದಾರೆ: ಕಟ್ಟಾ ಸುಬ್ರಮಣ್ಯ ನಾಯ್ಡು - ಎಂಟಿಬಿ ನಾಗರಾಜ ಉಪಚುನಾವಣೆ ಪ್ರಚಾರ
ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಒಪ್ಪಿಕೊಂಡಿದ್ದಕ್ಕೆ ನಾನೇ ಸಾಕ್ಷಿ. ಈಗ ಅವರು ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು
ಶರತ್ ಬಚ್ಚೇಗೌಡಗೆ ಇನ್ನೂ ಸಮಯವಿದೆ, ಬಿಜೆಪಿ ಬಾಗಿಲು ತೆಗೆದಿದೆ. ನಾಮಪತ್ರ ವಾಪಾಸ್ ತೆಗೆದುಕೊಂಡು, ಎಂಟಿಬಿ ಪರ ಪ್ರಚಾರ ಮಾಡಲಿ. ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಒಂದಾಗಿದ್ದಾರೆ ಎಂದರೆ ಎಂಟಿಬಿ ಬಲಿಷ್ಟ ಅಭ್ಯರ್ಥಿ ಎಂದು ಕಾಣುವುದಿಲ್ಲವೇ? ಎಂದರು.
ಶರತ್ಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ನೀಡಲಾಗಿತ್ತು. ಕಳೆದ ಚುನಾವಣೆಯಲ್ಲಿ ನೀಡಿದ್ದ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಮತ ಹಾಕಲು ಮತದಾರರು ಸಿದ್ಧರಿದ್ದಾರೆ. ಎಂಟಿಬಿಯನ್ನು ಗೆಲ್ಲಿಸಲು ಯುವಕರು ಉತ್ಸುಕರಾಗಿದ್ದಾರೆ ಎಂದು ಹೇಳಿದ್ರು.